ADVERTISEMENT

ಬಾಂಗ್ಲಾ ಚುನಾವಣೆಯಲ್ಲಿ ಬಿಜೆಪಿ ಹೆಗ್ಗುರುತು: ಒಂದು ಸ್ಥಾನ ಗೆಲುವು

ಏಜೆನ್ಸೀಸ್
Published 14 ಫೆಬ್ರುವರಿ 2026, 10:39 IST
Last Updated 14 ಫೆಬ್ರುವರಿ 2026, 10:39 IST
<div class="paragraphs"><p>ಬಾಂಗ್ಲಾದೇಶದ ಮತದಾರರು</p></div>

ಬಾಂಗ್ಲಾದೇಶದ ಮತದಾರರು

   

ಎಕ್ಸ್‌ ಚಿತ್ರ

ಢಾಕಾ: ಬಾಂಗ್ಲಾದೇಶದ 13ನೇ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎ.ಆರ್‌.ಪಾರ್ಥೊ ಗೆಲುವು ಸಾಧಿಸುವ ಮೂಲಕ ದೇಶದಲ್ಲಿ ಸಂಚಲನ ಮೂಡಿಸಿದ್ದಾರೆ.

ADVERTISEMENT

ಇಲ್ಲಿನ ಭೋಲಾ–1ರ ಕ್ಷೇತ್ರದಲ್ಲಿ ಬಾಂಗ್ಲಾದೇಶ ಜಮಾತ್‌–ಇ–ಇಸ್ಲಾಮಿ ಪಕ್ಷದ ಅಭ್ಯರ್ಥಿ ನಜ್ರುಲ್ ಇಸ್ಲಾಂ ಎದುರು ಪಾರ್ಥೊ ಸುಮಾರು 30 ಸಾವಿರ ಮತಗಳ ಅಂತರದಲ್ಲಿ ಜಯ ದಾಖಲಿಸಿದರು.

ನಜ್ರುಲ್ ಇಸ್ಲಾಂ ಅವರು 75,337 ಮತಗಳನ್ನು ಪಡೆದರೆ ಪಾರ್ಥೊ 1,05,543 ಮತಗಳನ್ನು ಪಡೆದಿದ್ದಾರೆ. 

ಬಿಜೆಪಿ ಎಂಬ ಹೆಸರು ಕೇಳಿದ ಕ್ಷಣವೇ ಮನಸ್ಸು ಭಾರತದತ್ತ ಓಡಬಹುದು ಆದರೆ ಈ ಬಿಜೆಪಿ ಭಾರತಕ್ಕೆ ಸಂಬಂಧಿಸಿದ್ದಲ್ಲ, ಇದು ಬಾಂಗ್ಲಾಗೆ ಸೇರಿದ ಪಕ್ಷ. ಇದರ ಹೆಸರು ಬಾಂಗ್ಲಾದೇಶ ಜಾತಿಯ ಪಕ್ಷ (ಬಿಜೆಪಿ).

ಯಾರು ಎ.ಆರ್‌.ಪಾರ್ಥೊ?

ಎ.ರೆಹಮಾನ್‌ ಪಾರ್ಥೊ ವೃತ್ತಿಯಲ್ಲಿ ವಕೀಲರು ಹಾಗೂ ಶಿಕ್ಷಣ ತಜ್ಞರಾಗಿದ್ದಾರೆ. ಇವರು ಢಾಕಾದಲ್ಲಿರುವ ಬ್ರಿಟಿಷ್ ಸ್ಕೂಲ್ ಆಫ್ ಲಾ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

2008ರಲ್ಲಿ ಪಾರ್ಥೊ ಅವರು ಭೋಲಾ–1ರ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಈ ಸಲ ಅವರು ತಾವು ಸ್ಥಾಪಿಸಿದ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಿ ಗೆಲುವು ದಾಖಲಿಸಿದ್ದಾರೆ. ಬಾಂಗ್ಲಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆದಿದೆ. 

ಚುನಾವಣಾ ಚಿತ್ರಣ...

ಬಾಂಗ್ಲಾ ಚುನಾವಣಾ ಆಯೋಗ 297 ಕ್ಷೇತ್ರಗಳ ಫಲಿತಾಂಶವನ್ನು ಪ್ರಕಟಿಸಿದೆ. ಬಾಂಗ್ಲಾ ರಾಷ್ಟ್ರೀಯ ಪಕ್ಷ (ಬಿಎನ್‌ಪಿ) ಹಾಗೂ ಮೈತ್ರಿ ಪಕ್ಷಗಳು 212 ಸ್ಥಾನಗಳನ್ನು ಗೆದ್ದುಕೊಂಡಿದೆ. ವಿರೋಧ ಪಕ್ಷ ಜಮಾತ್‌–ಇ–ಇಸ್ಲಾಮಿ(ಜೆಇಇ) ಮತ್ತು ಮೈತ್ರಿ ಪಕ್ಷಗಳು 77 ಸ್ಥಾನಗಳನ್ನು ಗೆದ್ದುಕೊಂಡಿದೆ. ಪಕ್ಷೇತರರು ಸೇರಿ ಇತರೆ ಸಣ್ಣ ಪುಟ್ಟ ಪಕ್ಷಗಳು 8 ಸ್ಥಾನಗಳನ್ನು ಗೆದ್ದಿವೆ. 

ಈ ಚುನಾವಣೆಯಲ್ಲಿ 50 ರಾಜಕೀಯ ಪಕ್ಷಗಳು 2,028 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಇವರಲ್ಲಿ 273 ಮಂದಿ ಸ್ವತಂತ್ರ ಅಭ್ಯರ್ಥಿಗಳು ಹಾಗೂ 83 ಮಹಿಳಾ ಅಭ್ಯರ್ಥಿಗಳು ಸೇರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.