ADVERTISEMENT

ವಿಮಾನ ದುರಂತ: ನೇಪಾಳದ ಪಶುಪತಿನಾಥ ದೇಗುಲದ ಸಮೀಪ ನಾಲ್ವರು ಭಾರತೀಯರ ಅಂತ್ಯಕ್ರಿಯೆ

ಪಿಟಿಐ
Published 2 ಜೂನ್ 2022, 12:44 IST
Last Updated 2 ಜೂನ್ 2022, 12:44 IST
ನೇಪಾಳದ ಥಾಸಾಂಗ್ ಪುರಸಭೆಯ ಸನೋಸ್‌ವೇರ್ ಪ್ರದೇಶದ 14,500 ಅಡಿ ಎತ್ತರದಲ್ಲಿ ತಾರಾ ಏರ್‌ ವಿಮಾನ ಅಪಘಾತಕ್ಕೀಡಾಗಿ, ಅವಶೇಷಗಳು ಪರ್ವತದ ಮೇಲೆ ಛಿದ್ರವಾಗಿ ಬಿದ್ದಿರುವುದನ್ನು ಸೇನಾ ಸಿಬ್ಬಂದಿ ಪತ್ತೆ ಹಚ್ಚಿದರು – ಎಪಿ/ಪಿಟಿಐ ಚಿತ್ರ
ನೇಪಾಳದ ಥಾಸಾಂಗ್ ಪುರಸಭೆಯ ಸನೋಸ್‌ವೇರ್ ಪ್ರದೇಶದ 14,500 ಅಡಿ ಎತ್ತರದಲ್ಲಿ ತಾರಾ ಏರ್‌ ವಿಮಾನ ಅಪಘಾತಕ್ಕೀಡಾಗಿ, ಅವಶೇಷಗಳು ಪರ್ವತದ ಮೇಲೆ ಛಿದ್ರವಾಗಿ ಬಿದ್ದಿರುವುದನ್ನು ಸೇನಾ ಸಿಬ್ಬಂದಿ ಪತ್ತೆ ಹಚ್ಚಿದರು – ಎಪಿ/ಪಿಟಿಐ ಚಿತ್ರ   

ಕಠ್ಮಂಡು: ನೇಪಾಳದ ಗುಡ್ಡಗಾಡು ಪ್ರದೇಶದಲ್ಲಿ ತಾರಾ ಏರ್ ಸಂಸ್ಥೆಯ ವಿಮಾನಭಾನುವಾರ ಪತನವಾಗಿ 22 ಮಂದಿ ಮೃತಪಟ್ಟಿದ್ದರು. ಇದೇವೇಳೆ ಪ್ರಾಣ ಕಳೆದುಕೊಂಡಿದ್ದ ನಾಲ್ವರು ಭಾರತೀಯರ ಅಂತ್ಯಕ್ರಿಯೆಯನ್ನು ಇಲ್ಲಿನ ಪವಿತ್ರ ಪಶುಪತಿನಾಥ ದೇವಾಲಯದಸಮೀಪ ಗುರುವಾರ ನೆರವೇರಿಸಲಾಗಿದೆ.

ಕೆನಡಾದ 'ಡಿ ಹ್ಯಾವಿಲ್ಯಾಂಡ್' ನಿರ್ಮಿತ ಈ ವಿಮಾನದಲ್ಲಿ ನಾಲ್ವರು ಭಾರತೀಯರು, ಜರ್ಮನಿಯ ಇಬ್ಬರು, 13 ಮಂದಿ ನೇಪಾಳಿಗರು ಹಾಗೂ ಮೂವರು ಸಿಬ್ಬಂದಿ ಸೇರಿ 22 ಜನರು ಪೋಖರಾ ನಗರದಿಂದ ಮಧ್ಯ ನೇಪಾಳದ ಪ್ರಸಿದ್ಧ ಚಾರಣ ತಾಣ ಜೋಮ್ಸಮ್‌ಗೆ ಪಯಣಿಸುತ್ತಿದ್ದರು.

ಉದ್ಯಮಿಯಾದ ಅಶೋಕ್‌ ಕುಮಾರ್‌ ತ್ರಿಪಾಠಿ (54) ಹಾಗೂ ಅವರಿಂದ ವಿಚ್ಛೇದನ ಪಡೆದಿದ್ದ ವೈಭವಿ ಬಂದೇಕರ್‌ ತ್ರಿಪಾಠಿ (51) ಅವರು ತಮ್ಮ ಮಕ್ಕಳಾದ ಧನುಷ್‌ (22), ರಿತಿಕಾ (15) ಅವರೊಂದಿಗೆ ರಜೆ ಕಳೆಯುವುದ್ಕಾಗಿ ನೇಪಾಳಕ್ಕೆ ಆಗಮಿಸಿದ್ದರು.

ADVERTISEMENT

ತ್ರಿಭುವನ್ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ, ಶವಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿತ್ತು. ನಂತರನಾಲ್ವರ ಅಂತ್ಯಕ್ರಿಯೆಯನ್ನುಪಶುಪತಿನಾಥ ದೇವಾಲಯದ ಬಳಿ ಇರುವ ವಿದ್ಯುತ್‌ ಚಿತಾಗರದಲ್ಲಿ ನೆರವೇರಿಸಲಾಗಿದೆ. ಈ ವೇಳೆತ್ರಿಪಾಠಿ ಅವರ ಸಹೋದರ ತಮ್ಮ ಪತ್ನಿಯೊಂದಿಗೆ ಪಾಲ್ಗೊಂಡಿದ್ದರು.

ಪಶುಪತಿನಾಥ ದೇವಾಲಯವು ಬಗಮತಿ ನದಿ ದಂಡೆಯ ಮೇಲೆ ನಿರ್ಮಾಣವಾಗಿದ್ದು, ನೇಪಾಳದಲ್ಲಿರುವ ಪ್ರಮುಖ ಹಿಂದೂ ದೇವಾಲಗಳಲ್ಲಿ ಒಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.