ADVERTISEMENT

ಹಿಲರಿ –ಬಿಲ್‌ ಕ್ಲಿಂಟನ್‌ ನಿವಾಸದಲ್ಲಿ ಬಾಂಬ್‌ ಪತ್ತೆ

ಏಜೆನ್ಸೀಸ್
Published 24 ಅಕ್ಟೋಬರ್ 2018, 14:21 IST
Last Updated 24 ಅಕ್ಟೋಬರ್ 2018, 14:21 IST
ಹಿಲರಿ ಹಾಗೂ ಅಮೆರಿಕದ ಮಾಜಿ ಅಧ್ಯಕ್ಷ ಬಿಲ್‌ ಕ್ಲಿಂಟನ್‌
ಹಿಲರಿ ಹಾಗೂ ಅಮೆರಿಕದ ಮಾಜಿ ಅಧ್ಯಕ್ಷ ಬಿಲ್‌ ಕ್ಲಿಂಟನ್‌    

ವಾಷಿಂಗ್ಟನ್‌: ಅಮೆರಿಕದ ರಾಜಕೀಯ ನಾಯಕರಾದ ಹಿಲರಿ ಮತ್ತು ಬಿಲ್‌ ಕ್ಲಿಂಟನ್‌ ಅವರ ನ್ಯೂಯಾರ್ಕ್ ಉಪನಗರದಲ್ಲಿನ ನಿವಾಸದಲ್ಲಿ ಜೀವಂತ ಸ್ಫೋಟಕ ಸಾಧನ ಪತ್ತೆಯಾಗಿದೆ.

ಕೋಟ್ಯಧಿಪತಿ ಜಾರ್ಜ್‌ ಸೊರೊಸ್‌ ಅವರ ನಿವಾಸದ ಸಮೀಪ ಸೋಮವಾರ ಪತ್ತೆಯಾಗಿದ್ದ ಸ್ಫೋಟಕಕ್ಕೂ ಕ್ಲಿಂಟರ್‌ ಅವರ ನಿವಾಸದಲ್ಲಿ ಬಾಂಬ್‌ ಪತ್ತೆಯಾಗಿರುವುದಕ್ಕೂ ಸಂಬಂಧವಿರುವುದಾಗಿ ಅಮೆರಿಕದ ತನಿಖಾಧಿಕಾರಿಗಳು ಶಂಕಿಸಿದ್ದಾರೆ.

ಛಪಾಕ್ವಾದಲ್ಲಿನ ಅಮೆರಿಕದ ಮಾಜಿ ಅಧ್ಯಕ್ಷ ಬಿಲ್‌ಕ್ಲಿಂಟನ್‌ ಅವರ ನಿವಾಸದಲ್ಲಿ ಬುಧವಾರ ಬೆಳಿಗ್ಗೆ ಸ್ಫೋಟಕ ಸಾಧನ ಪತ್ತೆಯಾಗಿದೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಹೆಸರಿಗೆ ರವಾನೆಯಾಗಿದ್ದ ಸ್ಫೋಟಕವನ್ನೂ ರಹಸ್ಯ ಕಾರ್ಯಾಚರಣೆಯಲ್ಲಿವಶಪಡಿಸಿಕೊಂಡಿರುವುದಾಗಿ ವರದಿಯಾಗಿದೆ.

ADVERTISEMENT

ಪತ್ತೆಯಾಗಿರುವ ಅನುಮಾನಾಸ್ಪದ ವಸ್ತುವಿನ ಬಗ್ಗೆ ತನಿಖೆಯನ್ನು ಎಫ್‌ಬಿಐ ವಹಿಸಿದ್ದು, ನ್ಯೂ ಕಾಸ್ಟೆಲ್‌ನ ಪೊಲೀಸರು ತನಿಖೆಗೆ ಸಹಕರಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.