ADVERTISEMENT

2025ರಲ್ಲಿ 19.5 ಟ್ರಿಲಿಯನ್ ಡಾಲರ್ ಮೀರಲಿದೆ ಚೀನಾ ಆರ್ಥಿಕತೆ: ವರದಿ

ರಾಯಿಟರ್ಸ್
Published 9 ಜುಲೈ 2025, 11:04 IST
Last Updated 9 ಜುಲೈ 2025, 11:04 IST
   

ಬೀಜಿಂಗ್‌: ದೇಶದ ಆರ್ಥಿಕತೆಯು ಇದೇ ವರ್ಷ 140 ಟ್ರಿಲಿಯನ್‌ ಯುವಾನ್‌ (19.5 ಟ್ರಿಲಿಯನ್‌ ಡಾಲರ್‌) ಮೀರಲಿದೆ ಎಂದು ಚೀನಾ ಸರ್ಕಾರಿ ಏಜೆನ್ಸಿ ಹೇಳಿದೆ.

ರಾಷ್ಟ್ರೀಯ ಅಭಿವೃದ್ಧಿ ಮತ್ತು ಸುಧಾರಣಾ ಆಯೋಗದ ಮುಖಸ್ಥ ಝ್ಹೆನ್‌ ಶಾಂಜೀ ಅವರು, 2025ರ ಅಂತ್ಯಕ್ಕೆ ಮುಕ್ತಾಯವಾಗಲಿರುವ ಪಂಚವಾರ್ಷಿಕ ನೀತಿ ಯೋಜನೆ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಇದೇ ವೇಳೆ, ಆರ್ಥಿಕತೆಯ ಗಾತ್ರದ ಬಗ್ಗೆ ತಿಳಿಸಿದ್ದಾರೆ.

ವಿದೇಶಿ ತಂತ್ರಜ್ಞಾನಗಳ ಮೇಲಿನ ನಿರ್ಬಂಧವು ಚೀನಾದ ಸ್ವಾವಲಂಬನೆ ಮತ್ತು ನಾವೀನ್ಯತೆಯ ಸಾಮರ್ಥ್ಯವನ್ನು ಬಲಪಡಿಸುತ್ತದೆ ಎಂದು ಝ್ಹೆನ್‌ ಪ್ರತಿಪಾದಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.