ADVERTISEMENT

ಕೋವಿಡ್: ಶಾಂಘೈ ನಗರದ ಪೂರ್ವ ಭಾಗದಲ್ಲಿ ಲಾಕ್‌ಡೌನ್ ತೆರವು

ಏಜೆನ್ಸೀಸ್
Published 31 ಮಾರ್ಚ್ 2022, 12:53 IST
Last Updated 31 ಮಾರ್ಚ್ 2022, 12:53 IST
ಶಾಂಘೈ ನಗರದ ಪೂರ್ವ ಭಾಗದಲ್ಲಿ ಲಾಕ್‌ಡೌನ್ ಅನ್ನು ತೆರವು ಮಾಡಲಾಗಿದೆ. ಆದರೆ ಪಶ್ಚಿಮ ಭಾಗದಲ್ಲಿ 2ನೇ ಹಂತದ ಲಾಕ್‌ಡೌನ್‌ಗೆ ಸಿದ್ಧತೆ ಮಾಡಿಕೊಳ್ಳುತ್ತಿರುವುದು
ಶಾಂಘೈ ನಗರದ ಪೂರ್ವ ಭಾಗದಲ್ಲಿ ಲಾಕ್‌ಡೌನ್ ಅನ್ನು ತೆರವು ಮಾಡಲಾಗಿದೆ. ಆದರೆ ಪಶ್ಚಿಮ ಭಾಗದಲ್ಲಿ 2ನೇ ಹಂತದ ಲಾಕ್‌ಡೌನ್‌ಗೆ ಸಿದ್ಧತೆ ಮಾಡಿಕೊಳ್ಳುತ್ತಿರುವುದು   

ಬೀಜಿಂಗ್: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಇತ್ತೀಚೆಗಷ್ಟೇ ಶಾಂಘೈ ನಗರದ ಪೂರ್ವ ಭಾಗದಲ್ಲಿ ಹೇರಲಾಗಿದ್ದ ಲಾಕ್‌ಡೌನ್‌ ಅನ್ನು ಗುರುವಾರ ತೆರವುಗೊಳಿಸಲಾಗಿದೆ. ಆದರೆ ಶಾಂಘೈ ನಗರದ ಪಶ್ಚಿಮ ಭಾಗದಲ್ಲಿ ಲಾಕ್‌ಡೌನ್ ಹೇರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಕಾರ ಜಿಲಿನ್ ನಗರದ ಜನ ಸಾಮಾನ್ಯರು 3 ವಾರಗಳ ಬಳಿಕ ಶುಕ್ರವಾರದಿಂದ ಮನೆಯಿಂದ ಹೊರಬಂದು ನಗರದೆಲ್ಲೆಡೆ ಸಂಚರಿಸಬಹುದಾಗಿದೆ.

ಜಿಲಿನ್ ನಗರದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿದೆ. ಆದರೆ ಜಿಲಿನ್ ಪ್ರಾಂತ್ಯದಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ಜನರು ಮಾಸ್ಕ್‌ಗಳನ್ನು ಧರಿಸಬೇಕು ಹಾಗೂ ಮನೆಯಲ್ಲಿದ್ದಾಗಲೂ 3 ಅಡಿ ಅಂತರ ಕಾಯ್ದುಕೊಳ್ಳಬೇಕು. ಆದರೆ ಉದ್ಯಾನವನಗಳು ಮತ್ತು ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.