ಸಾಂದರ್ಭಿಕ ಚಿತ್ರ
ಬೀಜಿಂಗ್: ‘ವ್ಯಾಪಕವಾಗಿದ್ದ ವೈರಾಣು ಸೋಂಕಿನ ತೀವ್ರತೆ ಚೀನಾದಲ್ಲಿ ಕ್ಷೀಣಿಸಿದ್ದು, ಶ್ವಾಸಕೋಶ ಸಂಬಂಧಿತ ಕಾಯಿಲೆ ಈಗಲೂ ಮುಂದುವರಿದಿದೆ’ ಎಂದು ಚೀನಾದ ರೋಗ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕೇಂದ್ರವು ಗುರುವಾರ ಹೇಳಿದೆ.
ಹ್ಯೂಮನ್ ಮೆಟಾನ್ಯೂಮೊವೈರಸ್ (hMPV) ಎಂಬುದು ಶ್ವಾಸಕೋಶ ಸಂಬಂಧಿತ ಒಂದು ಸಾಮಾನ್ಯ ಸೋಂಕಾಗಿದೆ. ಇದರ ಪ್ರಭಾವ ಈಗಲೂ ಇದೆ. ಆದರೆ ವೈರಾಣು ತೀವ್ರತೆ ಕ್ಷೀಣಿಸಿದೆ ಎಂದಿದೆ.
ಜನವರಿ ಅಂತ್ಯದ ಹೊತ್ತಿಗೆ ದೇಶವ್ಯಾಪಿ ಸೋಂಕಿನ ಪ್ರಮಾಣ ಗಣನೀಯವಾಗಿ ಇಳಿಮುಖವಾಗಲಿದೆ ಎಂದು ಅಂದಾಜಿಸಿದ್ದನ್ನು ವರದಿಯಲ್ಲಿ ಹೇಳಲಾಗಿದೆ.
ಚೀನಾದಲ್ಲಿ ಎಚ್‌ಎಂಪಿವಿ ಉಲ್ಬಣಗೊಂಡ ನಂತರ ಭಾರತದಲ್ಲೂ ಇಂಥ ಪ್ರಕರಣಗಳು ವರದಿಯಾಗಿದ್ದವು. ಆದರೆ ಇದು ಈ ಹಿಂದೆಯೇ ಇದ್ದ ವೈರಾಣುವಾಗಿದ್ದು, ಆತಂಕ ಬೇಡ ಎಂದು ಆರೋಗ್ಯ ಇಲಾಖೆ ಮತ್ತು ಸರ್ಕಾರ ಹೇಳಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.