ADVERTISEMENT

ಕೋವಿಡ್‌: ಶಾಂಘೈನಲ್ಲಿ ಒಂದೇ ದಿನ 25,146 ಲಕ್ಷಣ ರಹಿತ ಹೊಸ ಪ್ರಕರಣ ಪತ್ತೆ

ರಾಯಿಟರ್ಸ್
Published 14 ಏಪ್ರಿಲ್ 2022, 1:32 IST
Last Updated 14 ಏಪ್ರಿಲ್ 2022, 1:32 IST
ಲಾಕ್‌ಡೌನ್‌ನಲ್ಲಿರುವ ಶಾಂಘೈ ನಗರದ ಮನೆಗಳ ಮುಂದೆ ಸಿಬ್ಬಂದಿಯೊಬ್ಬರು ಸೂಚನೆ ನೀಡುತ್ತಿರುವುದು.  – ಎಪಿ ಚಿತ್ರ
ಲಾಕ್‌ಡೌನ್‌ನಲ್ಲಿರುವ ಶಾಂಘೈ ನಗರದ ಮನೆಗಳ ಮುಂದೆ ಸಿಬ್ಬಂದಿಯೊಬ್ಬರು ಸೂಚನೆ ನೀಡುತ್ತಿರುವುದು. – ಎಪಿ ಚಿತ್ರ   

ಬೀಜಿಂಗ್‌: ಚೀನಾದ ಅತಿದೊಡ್ಡ ನಗರ ಶಾಂಘೈನಲ್ಲಿ ಬುಧವಾರ ಒಂದೇ ದಿನ 25,146 ಲಕ್ಷಣ ರಹಿತ ಕೋವಿಡ್‌ ಹೊಸ ಪ್ರಕರಣಗಳು ವರದಿಯಾಗಿವೆ.

ರೋಗ ಲಕ್ಷಣವಿರುವ ಪ್ರಕರಣಗಳಲ್ಲೂ ಏರಿಕೆ ಕಂಡುಬಂದಿದೆ. 24 ಗಂಟೆ ಅವಧಿಯಲ್ಲಿ 2,573 ರೋಗ ಲಕ್ಷಣವಿರುವ ಪ್ರಕರಣಗಳು ಪತ್ತೆಯಾಗಿವೆ ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಚೀನಾದ ಇತರೆ ಪ್ರದೇಶಗಳಿಗೆ ಹೋಲಿಕೆ ಮಾಡಿದರೆ ವಾಣಿಜ್ಯ ನಗರಿ ಶಾಂಘೈನಲ್ಲಿ ಲಕ್ಷಣ ರಹಿತ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದ ಸೋಂಕಿತರು, ಸೌಮ್ಯ ಲಕ್ಷಣ ಮತ್ತು ಲಕ್ಷಣ ರಹಿತ ಪ್ರಕರಣಗಳ ಮಾಹಿತಿ ಅಸ್ಪಷ್ಟವಾಗಿದೆ ಎಂದು ವರದಿಯಾಗಿವೆ.

ADVERTISEMENT

ಕೋವಿಡ್‌ ಹರಡುವಿಕೆಯನ್ನು ನಿಯಂತ್ರಿಸಲು ಶಾಂಘೈನಲ್ಲಿ ವಿಧಿಸಲಾಗಿರುವ ಲಾಕ್‌ಡೌನ್‌ ಮೂರನೇ ವಾರಕ್ಕೆ ಕಾಲಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.