ADVERTISEMENT

ಚಂದ್ರನ ಮೇಲ್ಮೈಯಿಂದ ಮಾದರಿ ಸಂಗ್ರಹಿಸಿ ಮರಳಿದ ಚಾಂಗ್‌ಇ

ಪಿಟಿಐ
Published 17 ಡಿಸೆಂಬರ್ 2020, 19:45 IST
Last Updated 17 ಡಿಸೆಂಬರ್ 2020, 19:45 IST
ಚಂದ್ರನ ಅಂಗಳದಿಂದ ಮಾದರಿ ಸಂಗ್ರಹಿಸಿ ಗುರುವಾರ ಮರಳಿದ ‘ಚಾಂಗ್‌ ಇ’ ಅನ್ನು ಸಂಶೋಧಕರು ಪರಿಶೀಲಿಸುತ್ತಿರುವುದು
ಚಂದ್ರನ ಅಂಗಳದಿಂದ ಮಾದರಿ ಸಂಗ್ರಹಿಸಿ ಗುರುವಾರ ಮರಳಿದ ‘ಚಾಂಗ್‌ ಇ’ ಅನ್ನು ಸಂಶೋಧಕರು ಪರಿಶೀಲಿಸುತ್ತಿರುವುದು   

ಬೀಜಿಂಗ್‌: ಚಂದ್ರನ ಮೇಲ್ಮೈಯಿಂದ ಮಾದರಿಗಳನ್ನು ಸಂಗ್ರಹಿಸುವ ಚೀನಾದ ಮೊದಲ ಯತ್ನ ಯಶಸ್ವಿಯಾಗಿದೆ. ಮಾದರಿಗಳನ್ನು ಸಂಗ್ರಹಿಸಿದ ಚೀನಾದ ಉಪಗ್ರಹ ಚಾಂಗ್ಇ ಗುರುವಾರ ಬೆಳಿಗ್ಗೆ ಭೂಮಿಗೆ ಮರಳಿದೆ. 40 ವರ್ಷಗಳ ನಂತರ ಹೀಗೆ ಚಂದ್ರನ ಅಂಗಳದಿಂದ ಮಾದರಿಗಳನ್ನು ಸಂಗ್ರಹಿಸಲಾಗಿದೆ.

ಚಾಂಗ್‌ಇ ಉಪಗ್ರಹವು ಉತ್ತರ ಚೀನಾದ ಸಿಜಿವಂಗ್‌ನಲ್ಲಿ ಸ್ಥಳೀಯ ಕಾಲಮಾನ ಬೆಳಿಗ್ಗೆ4 1.59 ಗಂಟೆಗೆ ತಲುಪಿತು ಎಂದು ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ (ಸಿಎನ್‌ಎಸ್‌ಎ) ತಿಳಿಸಿದೆ. ಉಪಗ್ರಹದ ಉದ್ದೇಶ ಯಶಸ್ವಿಯಾಗಿದೆ ಎಂದು ಸಿಎನ್‌ಎಸ್‌ಎ ಮುಖ್ಯಸ್ಥ ಝಾಂಗ್ ಕೇಜಿಯಾನ್ ಪ್ರಕಟಿಸಿದರು.

ಚೀನಾದ ಚಂದ್ರಯಾನ ಕುರಿತು ಮೂರು ಹಂತಗಳಲ್ಲಿ ಮೊದಲ ಯತ್ನ ಯಶಸ್ವಿಯಾಗಿದೆ. ಉಪಗ್ರಹವನ್ನು ನವೆಂಬರ್ 24ರಂದು ಕಕ್ಷೆಗೆ ಉಡಾವಣೆ ಮಾಡಲಾಗಿತ್ತು.

ADVERTISEMENT

40ವರ್ಷಗಳ ನಂತರ ನಡೆದಿರುವ ಪ್ರಥಮ ಯತ್ನವಾಗಿತ್ತು. ಈ ಹಿಂದೆ ಅಮೆರಿಕ ಗಗನಯಾತ್ರಿಗಳನ್ನು ಕಳುಹಿಸಿ ಮಾದರಿ ಸಂಗ್ರಹಿಸಲು ಯತ್ನಿಸಿತ್ತು. ಅದಕ್ಕೂ ಹಿಂದೆ ರಷ್ಯಾ ಮಾನವರಹಿತ ಉಪಗ್ರಹ ಉಡಾವಣೆ ಮಾಡಿ ಇಂಥದೇ ಯತ್ನ ಕೈಗೊಂಡಿತ್ತು. ಆದರೆ, ಅಗ ಮಾದರಿ ಸಂಗ್ರಹಿಸಲು ಆಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.