ADVERTISEMENT

ಸಿಂಗಪುರ | ಭಾರತದ ಮಹಿಳೆಗೆ ಜನಾಂಗೀಯ ನಿಂದನೆ: ಚೀನಾ ಮೂಲದ ವ್ಯಕ್ತಿಗೆ ಶಿಕ್ಷೆ

ಪಿಟಿಐ
Published 7 ಆಗಸ್ಟ್ 2023, 16:20 IST
Last Updated 7 ಆಗಸ್ಟ್ 2023, 16:20 IST
   

ಸಿಂಗಪುರ: ಭಾರತ ಮೂಲದ 57 ವರ್ಷದ ಮಹಿಳೆಗೆ 2021ರ ಮೇ ತಿಂಗಳಿನಲ್ಲಿ ಜನಾಂಗೀಯ ನಿಂದನೆ ಮಾಡಿ ಎದೆಗೆ ಒದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚೀನಾ ಮೂಲದ ಸಿಂಗಾಪುರದ ವ್ಯಕ್ತಿಗೆ ಸೋಮವಾರ 3 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

2021ರ ಮೇ 7ರಂದು ಕರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಮಾಸ್ಕ್‌ (ಮುಖಗವಸು) ಧರಿಸಿ ಎಂದು ಹೇಳಿದ್ದಕ್ಕೆ ಆರಂಭವಾದ ಗಲಾಟೆಯಲ್ಲಿ, 32 ವರ್ಷದ ವಾಂಗ್‌ ಕ್ಸಿಂಗ್‌ ಫಾಂಗ್‌, ಭಾರತ ಮೂಲದ ನಿತಾ ವಿಷ್ಣುಭಾಯಿ ಅವರಿಗೆ ಜನಾಂಗೀಯ ನಿಂದನೆ ಮಾಡಿ, ಎದೆಗೆ ಒದ್ದು ಹಲ್ಲೆ ಮಾಡಿದ್ದರು.

ಸಂತ್ರಸ್ತೆಗೆ ₹ 814 (ಎಸ್‌ಜಿಡಿ 13.20) ಪರಿಹಾರ ನೀಡುವಂತೆ ಆದೇಶಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.