ADVERTISEMENT

ಹಾರುವ ತಟ್ಟೆಗಳ ಬಗ್ಗೆ ಅಮೆರಿಕ ಸಂಗ್ರಹಿಸಿದ ಎಲ್ಲಾ ದಾಖಲೆ ಬಿಡುಗಡೆ ಮಾಡಿದ ಸಿಐಎ

ಏಜೆನ್ಸೀಸ್
Published 16 ಜನವರಿ 2021, 11:36 IST
Last Updated 16 ಜನವರಿ 2021, 11:36 IST
ಅಮೆರಿಕ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿದ್ದ ಯುಎಫ್‌ಒ ಚಿತ್ರ
ಅಮೆರಿಕ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿದ್ದ ಯುಎಫ್‌ಒ ಚಿತ್ರ   

ವಾಷಿಂಗ್ಟನ್‌: ಆಕಾಶದಲ್ಲಿ ಕಾಣಿಸಿಕೊಳ್ಳುವ ಗುರುತಿಗೆ ಸಿಗದ ಆಕಾಶಕಾಯಗಳಾದ ಹಾರುವ ತಟ್ಟೆಗಳ (ಯುಎಫ್‌ಒ) ಬಗ್ಗೆ ಅಮೆರಿಕ ಸರ್ಕಾರ ಸುಮಾರು ಮೂರು ದಶಕಗಳಿಂದ ಸಂಗ್ರಹಿಸಿದ್ದ ದಾಖಲೆಗಳನ್ನು ಕೇಂದ್ರ ಗುಪ್ತಚರ ದಳ (ಸಿಐಎ) ಬಿಡುಗಡೆ ಮಾಡಿದೆ. ದಾಖಲೆಗಳನ್ನು ಸಾಮಾನ್ಯ ಜನರೂ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆಎಂದು ವರದಿಯಾಗಿದೆ.

ಅಮೆರಿಕ ಸರ್ಕಾರ ಹಲವು ವರ್ಷಗಳಿಂದ ಕಲೆಹಾಕಿದ್ದ ಯುಎಫ್‌ಒ ಬಗೆಗಿನ ಸುಮಾರು 2,700 ಪುಟಗಳಷ್ಟು ಮಹತ್ವದ ಮಾಹಿತಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಸಿಐಎ ತಿಳಿಸಿದೆ.

ಯುಎಫ್‌ಒ ಬಗೆಗಿನಮಾಹಿತಿ ಬಿಡುಗಡೆ ಮಾಡಬೇಕು ಎಂದು ಮಾಹಿತಿ ಹಕ್ಕು ಕಾಯ್ದೆಗೆ ಸಮಾನವಾದ, ಮಾಹಿತಿ ಸ್ವಾತಂತ್ರ್ಯ ಕಾಯ್ದೆಯಡಿಯಲ್ಲಿ ಕಳೆದ 25 ವರ್ಷಗಳಿಂದ ಸಾಕಷ್ಟು ಮನವಿಗಳು ಸಲ್ಲಿಕೆಯಾಗಿದ್ದವು. ಅದರಂತೆ ಮಾಹಿತಿ ಬಿಡುಗಡೆ ಮಾಡಲಾಗಿದೆ. ಸರ್ಕಾರದ ರಹಸ್ಯ ಮಾಹಿತಿಗಳನ್ನೊಳಗೊಂಡ ಆನ್‌ಲೈನ್‌ ಆರ್ಕೈವ್‌ ‘ಬ್ಲಾಕ್‌ ವಾಲ್ಟ್‌’ನಲ್ಲಿ ಈ ಮಾಹಿತಿಗಳು ಲಭ್ಯವಿವೆ ಎಂದು ದಿ ಗಾರ್ಡಿಯನ್‌ ವರದಿಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.