ADVERTISEMENT

ನ್ಯೂಜಿಲೆಂಡ್: 102 ದಿನಗಳ ಬಳಿಕ ಮತ್ತೆ ಕೊರೊನಾ ಪ್ರಕರಣ ಪತ್ತೆ

ಸೋಂಕಿನ ಮೂಲ ನಿಗೂಢ, ವಾಣಿಜ್ಯ ವ್ಯವಹಾರ ಬಂದ್: ಪ್ರಧಾನಿ ಜೆಸಿಂದಾ ಅರ್ಡರ್ನ್

ಏಜೆನ್ಸೀಸ್
Published 11 ಆಗಸ್ಟ್ 2020, 11:16 IST
Last Updated 11 ಆಗಸ್ಟ್ 2020, 11:16 IST
ನ್ಯೂಜಿಲೆಂಡ್ ಪ್ರಧಾನಿ ಜೆಸಿಂದಾ ಅರ್ಡರ್ನ್
ನ್ಯೂಜಿಲೆಂಡ್ ಪ್ರಧಾನಿ ಜೆಸಿಂದಾ ಅರ್ಡರ್ನ್   

ವೆಲ್ಲಿಂಗ್‌ಟನ್: ನ್ಯೂಜಿಲೆಂಡ್‌ನಲ್ಲಿ 102 ದಿನಗಳ ಬಳಿಕ ಸ್ಥಳೀಯವಾಗಿ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ ಎಂದು ಅಲ್ಲಿನ ಪ್ರಧಾನಿ ಜೆಸಿಂದಾ ಅರ್ಡರ್ನ್ ಮಂಗಳವಾರ ಹೇಳಿದ್ದಾರೆ.

ಆಕ್ಲೆಂಡ್‌ ಪ್ರದೇಶದ ಮನೆಯೊಂದರಲ್ಲಿ ನಾಲ್ಕು ಕೊರೊನಾ ವೈರಸ್ ಪ್ರಕರಣಗಳನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದು, ಸೋಂಕಿನ ಮೂಲ ಇನ್ನೂ ಪತ್ತೆಯಾಗಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಅಕ್ಲೆಂಡ್ ನ್ಯೂಜಿಲೆಂಡ್‌ನ ಅತಿದೊಡ್ಡ ನಗರವಾಗಿದ್ದು, ಬುಧವಾರ ಮಧ್ಯಾಹ್ನದಿಂದಲೇ ಜನರನ್ನು ಮನೆ ಬಿಟ್ಟು ಹೊರಬಾರದಂತೆ ವಿನಂತಿಸಲಾಗುವುದು. ವಾಣಿಜ್ಯ ವಹಿವಾಟುಗಳನ್ನು ಬಂದ್ ಮಾಡಲಾಗುವುದು’ ಎಂದೂ ಜೆಸಿಂದಾ ತಿಳಿಸಿದ್ದಾರೆ.

ADVERTISEMENT

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಕ್ಷ ‌ಟೆಡ್ರೋಸ್ ಅಧಾನೊಮ್ ಘೆಬ್ರೆಯಸಸ್, ‘ನ್ಯೂಜಿಲೆಂಡ್‌ನಲ್ಲಿ ಕಳೆದ ನೂರು ದಿನದಿಂದ ಯಾವುದೇ ಸೋಂಕು ಹರಡಿದ ವರದಿಯಾಗಿಲ್ಲ. ಇದು ಶ್ಲಾಘನೀಯ’ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.