ADVERTISEMENT

Covid-19 World Update: 8.01 ಕೋಟಿ ಜನರಿಗೆ ಕೋವಿಡ್‌ ಸೋಂಕು

ಏಜೆನ್ಸೀಸ್
Published 26 ಡಿಸೆಂಬರ್ 2020, 2:54 IST
Last Updated 26 ಡಿಸೆಂಬರ್ 2020, 2:54 IST
ಕೊರೊನಾ ವೈರಸ್ ಸೋಂಕು ಪರೀಕ್ಷೆ (ಸಾಂದರ್ಭಿಕ ಚಿತ್ರ)
ಕೊರೊನಾ ವೈರಸ್ ಸೋಂಕು ಪರೀಕ್ಷೆ (ಸಾಂದರ್ಭಿಕ ಚಿತ್ರ)   

ವಾಷಿಂಗ್ಟನ್‌: ವಿಶ್ವದಾದ್ಯಂತ ಇದುವರೆಗೆ ಒಟ್ಟು 8.01 ಕೋಟಿ ಜನರಿಗೆ ಕೋವಿಡ್‌–19 ಸೋಂಕು ದೃಢಪಟ್ಟಿದೆ. ಇದರಲ್ಲಿ 5.64 ಕೋಟಿ ಸೋಂಕಿತರು ಗುಣಮುಖರಾಗಿದ್ದು, 17.56 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದು ವರ್ಲ್ಡೊ ಮೀಟರ್ ವೆಬ್‌ಸೈಟ್‌ ವರದಿ ಮಾಡಿದೆ.

ಸದ್ಯ ಜಗತ್ತಿನಲ್ಲಿ 2,19,78,310 ಸಕ್ರಿಯ ಪ್ರಕರಣಗಳಿವೆ. ‌ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ಅಮೆರಿಕದಲ್ಲಿ 76,14,192 ಸಕ್ರಿಯ ಪ್ರಕರಣಗಳಿವೆ.

ಫ್ರಾನ್ಸ್‌ನಲ್ಲಿ 22,95,899, ಬ್ರೆಜಿಲ್‌ನಲ್ಲಿ 7,98,710, ಇಟಲಿಯಲ್ಲಿ 5,79,886, ಮೆಕ್ಸಿಕೊದಲ್ಲಿ 2,26,136, ದಕ್ಷಿಣ ಆಫ್ರಿಕಾದಲ್ಲಿ 1,26,832 ಸಕ್ರಿಯ ಪ್ರಕರಣಗಳಿವೆ.

ADVERTISEMENT

ಇಂಗ್ಲೆಂಡ್, ಫ್ರಾನ್ಸ್‌ ಮತ್ತು ಮೆಕ್ಸಿಕೊದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.