ADVERTISEMENT

ಬದುಕಿದ್ದಕ್ಕೆ ಪಾಪ ಪ್ರಜ್ಞೆ ಕಾಡಿದೆ: ಕೋವಿಡ್‌ ಚಿಕಿತ್ಸೆ ಬಿಲ್‌ಗೆ ವೃದ್ಧ ಆಘಾತ

ಪಿಟಿಐ
Published 14 ಜೂನ್ 2020, 15:40 IST
Last Updated 14 ಜೂನ್ 2020, 15:40 IST
ಕೊರೊನಾ ವೈರಸ್‌ ಸೋಂಕಿತರ ಪ್ರಾತಿನಿಧಿಕ ಚಿತ್ರ
ಕೊರೊನಾ ವೈರಸ್‌ ಸೋಂಕಿತರ ಪ್ರಾತಿನಿಧಿಕ ಚಿತ್ರ    

ವಾಷಿಂಗ್ಟನ್‌: ಕೊರೊನಾ ಸೋಂಕಿಗೆ ಒಳಗಾಗಿ ಸಾವು–ಬದುಕಿನ ನಡುವೆ ಹೋರಾಡಿ ಕೊನೆಗೂ ಗುಣಮುಖರಾದ70 ವರ್ಷದ ವೃದ್ಧರೊಬ್ಬರು, ಆಸ್ಪತ್ರೆಯ ಬಿಲ್(₹8.14 ಕೋಟಿ)‌ ನೋಡಿ ಆಘಾತಕ್ಕೊಳಗಾಗಿದ್ದಾರೆ.

ಸೋಂಕಿಗೆ ಒಳಗಾಗಿದ್ದಮೈಕಲ್‌ ಫ್ಲೋರ್, ಚಿಕಿತ್ಸೆಗೆಂದು ಸ್ವೀಡಿಶ್‌ ಮೆಡಿಕಲ್‌ ಕೇಂದ್ರದಲ್ಲಿ ದಾಖಲಾಗಿದ್ದರು. ‘ಆಸ್ಪತ್ರೆಯ ಬಿಲ್‌ ನೋಡಿ ಒಂದು ಕ್ಷಣ ಅವಕ್ಕಾಗಿದ್ದೆ. ಬದುಕುಳಿದಿದ್ದಕ್ಕೆ ಅಪರಾಧ ಪ್ರಜ್ಞೆ ಕಾಡುತ್ತಿದೆ’ಎಂದು ಫ್ಲೋರ್‌ಪ್ರತಿಕ್ರಿಯೆ ನೀಡಿದರು ಎಂದು ಸೀಯಾಟಲ್‌‌ ಟೈಮ್ಸ್‌ ವರದಿ ಮಾಡಿದೆ.

ಫ್ಲೋರ್‌ ಆಸ್ಪತ್ರೆಯಲ್ಲಿ 62 ದಿನಗಳ ಕಾಲ ಚಿಕಿತ್ಸೆ ಪಡೆದಿದ್ದರು. ಸೋಂಕಿಗೆ ಒಳಗಾಗಿ ಅತಿ ಹೆಚ್ಚು ದಿನ ಆ ಆಸ್ಪತ್ರೆಯಲ್ಲಿ ಇದ್ದ ರೋಗಿ ಇವರಾಗಿದ್ದರು. ಆರೋಗ್ಯ ವಿಮೆ ಹಾಗೂಕೋವಿಡ್‌–19 ರೋಗಿಗಳಿಗೆ ಕಾಂಗ್ರೆಸ್‌ ಜಾರಿಗೊಳಿಸಿರುವ ವಿಶೇಷ ಆರ್ಥಿಕ ನಿಯಂತ್ರಣವು ಫ್ಲೋರ್‌ ನೆರವಿಗೆ ಬರುವ ಸಾಧ್ಯತೆ ಇದೆ ಎಂದು ಟೈಮ್ಸ್‌ ಉಲ್ಲೇಖಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.