ADVERTISEMENT

Covid-19 World Update: 76 ಲಕ್ಷ ಸೋಂಕಿತರು, ಮೃತರ ಸಂಖ್ಯೆ 4.25 ಲಕ್ಷ

ಏಜೆನ್ಸೀಸ್
Published 13 ಜೂನ್ 2020, 4:16 IST
Last Updated 13 ಜೂನ್ 2020, 4:16 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಪ್ಯಾರಿಸ್‌: ಚೀನಾದಿಂದ ಪ್ರಸರಣಗೊಂಡ ಕೊರೊನಾ ವೈರಸ್‌ ಸೋಂಕಿಗೆ ಜಾಗತಿಕವಾಗಿ 4,25,000 ಜನರು ಬಲಿಯಾಗಿದ್ದಾರೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಶನಿವಾರ ಬೆಳಗ್ಗೆಯ ವರದಿಯಂತೆ ಜಾಗತಿಕವಾಗಿ 76,32,517 ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿದ್ದು 4,25,282 ಜನರು ಮೃತಪಟ್ಟಿದ್ದಾರೆ.

ಯುರೋಪ್‌ನಲ್ಲಿ 23,63,538 ಕೋವಿಡ್‌ ಸೋಂಕಿನ ಪ್ರಕರಣಗಳು ದಾಖಲಾಗಿದ್ದು 1,86,843 ಜನರು ಮೃತಪಟ್ಟಿದ್ದಾರೆ. ಲ್ಯಾಟಿನ್‌ ಅಮೆರಿಕ ಭಾಗದಲ್ಲಿ ಸೋಂಕು ವೇಗವಾಗಿ ಪಸರಿಸುತ್ತಿದ್ದು15,69,938 ಪ್ರಕರಣಗಳು ಸಕ್ರಿಯವಾಗಿದ್ದು 76,343 ಜನರ ಸಾವನ್ನಪ್ಪಿದ್ದಾರೆ.

ADVERTISEMENT

ಅಮೆರಿಕದಲ್ಲಿ ಕೊರೊನಾ ಸೋಂಕಿನ ಮರಣಮೃದಂಗಮುಂದುವರೆದಿದೆ. ಜಾಗತಿಕವಾಗಿ ಅಮೆರಿಕದಲ್ಲಿ ಅತಿ ಹೆಚ್ಚು ಸಾವು ಸಂಭವಿಸಿವೆ. ಇಲ್ಲಿಯವರೆಗೂ ಅಮೆರಿಕದಲ್ಲಿ 1,14,643 ಜನರು ಮೃತಪಟ್ಟಿದ್ದಾರೆ. ಬ್ರೆಜಿಲ್‌ನಲ್ಲಿ 41,828, ಬ್ರಿಟನ್‌ನಲ್ಲಿ41,481, ಇಟಲಿಯಲ್ಲಿ 34,223 ಹಾಗೂ ಫ್ರಾನ್ಸ್‌ನಲ್ಲಿ 29,374 ಜನರು ಮೃತಪಟ್ಟಿದ್ದಾರೆ.

ಜಾಗತಿಕವಾಗಿ 36 ಲಕ್ಷ ಕ್ರಿಯಾಶೀಲ ಪ್ರಕರಣಗಳಿದ್ದು, 40 ಲಕ್ಷ ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.