ವಾಷಿಂಗ್ಟನ್: ವಿಶ್ವದಾದ್ಯಂತ ಕೊರೊನಾ ವೈರಸ್ ಸೋಂಕು ತಗುಲಿದವರ ಸಂಖ್ಯೆಐದು ಕೋಟಿ ದಾಟಿದೆ.
ವರ್ಲ್ಡೋಮೀಟರ್ ವೆಬ್‌ಸೈಟ್ ಅಂಕಿಅಂಶ ಪ್ರಕಾರ, ಜಗತ್ತಿನಾದ್ಯಂತ ಈವರೆಗೆ 5.05ಕೋಟಿಗೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. 12.59ಲಕ್ಷಕ್ಕೂ ಹೆಚ್ಚು ಸೋಂಕಿತರು ಅಸುನೀಗಿದ್ದಾರೆ. 3.56 ಕೋಟಿಗೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ.
ಅಮೆರಿಕದಲ್ಲಿ ಈವರೆಗೆ ಸೋಂಕು ತಗುಲಿದವರ ಸಂಖ್ಯೆ 1 ಕೋಟಿ ದಾಟಿದೆ. 2.43 ಲಕ್ಷಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. 64.41 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 34 ಲಕ್ಷದಷ್ಟು ಸಕ್ರಿಯ ಪ್ರಕರಣಗಳಿವೆ.
ಇದನ್ನೂ ಓದಿ:ಜೊ ಬೈಡನ್ ಅಮೆರಿಕದ ಹೊಸ ಅಧ್ಯಕ್ಷ
ಉಳಿದಂತೆ ಭಾರತದಲ್ಲಿ 513,059, ಬ್ರೆಜಿಲ್‌ನಲ್ಲಿ 426,931, ರಷ್ಯಾದಲ್ಲಿ 4,19,378, ಅರ್ಜೆಂಟೀನಾದಲ್ಲಿ 1,50,190 ಸಕ್ರಿಯ ಪ್ರಕರಣಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.