ADVERTISEMENT

ಚೀನಾ–ಪಾಕ್‌ ಆರ್ಥಿಕ ಕಾರಿಡಾರ್‌ ಯೋಜನೆ ಕಾಮಗಾರಿ ಕುಂಠಿತ

ಒಟ್ಟು 15 ಯೋಜನೆಗಳ ಪೈಕಿ ಕೇವಲ 3 ಯೋಜನೆಗಳು ಮಾತ್ರ ನಿಗದಿತ ಕಾಲದಲ್ಲಿ ಪೂರ್ಣಗೊಂಡಿವೆ: ವರದಿ

ಪಿಟಿಐ
Published 8 ಮೇ 2022, 13:30 IST
Last Updated 8 ಮೇ 2022, 13:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಸ್ಲಾಮಾಬಾದ್‌: ಬರೋಬ್ಬರಿ 461 ಕೋಟಿ ರೂಪಾಯಿ (60 ಬಿಲಿಯನ್‌ ಯುಎಸ್‌ ಡಾಲರ್) ಮೊತ್ತದ ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್‌ (ಸಿಪಿಇಸಿ) ಯೋಜನೆ ಕಾಮಗಾರಿ ಕುಂಟುತ್ತಾ ಸಾಗಿದ್ದು, ಒಟ್ಟು 15 ಯೋಜನೆಗಳ ಪೈಕಿ ಕೇವಲ 3 ಯೋಜನೆಗಳು ಮಾತ್ರ ನಿಗದಿತ ಕಾಲದಲ್ಲಿ ಪೂರ್ಣಗೊಂಡಿವೆ ಎಂದು ಭಾನುವಾರ ಮಾಧ್ಯಮವೊಂದು ವರದಿ ಮಾಡಿದೆ.

ಈವರೆಗೆ ಪಾಕಿಸ್ತಾನದ ಗ್ವಾಡಾರ್‌ನಲ್ಲಿರುವ ₹ 2308 ಕೋಟಿ ಮೊತ್ತದ 3 ಸಿಪಿಇಸಿ ಯೋಜನೆಗಳನ್ನು ಮಾತ್ರ ಪೂರ್ಣಗೊಳಿಸಲಾಗಿದೆ. ನೀರು, ವಿದ್ಯುತ್‌ಸರಬರಾಜು ಸೇರಿದಂತೆ ₹ 15,391 ಕೋಟಿ ಮೊತ್ತದ ಇನ್ನೂ 12 ಯೋಜನೆಗಳ ಕಾಮಗಾರಿ ಬಾಕಿ ಉಳಿದಿದೆ ಎಂದು ‘ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌’ ವರದಿ ಮಾಡಿದೆ.

ಸಿಪಿಇಸಿ ಯೋಜನೆಯು ಚೀನಾದ ವಾಯವ್ಯ ಷಿನ್‌ಜಿಯಾಂಗ್‌ ಯುಘುರ್‌ ಸ್ವಾಯತ್ತ ಪ್ರದೇಶ ಮತ್ತು ಪಾಕಿಸ್ತಾನದ ಬಲೂಚಿಸ್ತಾನದಲ್ಲಿರುವ ಗ್ವಾಡಾರ್‌ ಬಂದರನ್ನು ಸಂಪರ್ಕಿಸುವ 3000 ಕಿಲೋಮೀಟರ್‌ ಉದ್ದದ ಮೂಲಸೌಕರ್ಯ ಯೋಜನೆಯಾಗಿದೆ. ಈ ಯೋಜನೆ ಭಾರತಕ್ಕೆ ಸೇರಿದ ಪಾಕ್‌ ಆಕ್ರಮಿತ ಕಾಶ್ಮೀರದ ಗಡಿಗುಂಟ ಹಾದುಹೋಗುವುದರಿಂದ ಭಾರತ ಈ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.