ADVERTISEMENT

ಬ್ರಿಟನ್‌: ಅಪರಾಧಿಗಳಿಗೆ ಪಬ್‌, ಕ್ರೀಡೆ, ಸಂಗೀತ ಕಾರ್ಯಕ್ರಮಗಳಿಗೆ ನಿರ್ಬಂಧ

ರಾಯಿಟರ್ಸ್
Published 25 ಆಗಸ್ಟ್ 2025, 10:34 IST
Last Updated 25 ಆಗಸ್ಟ್ 2025, 10:34 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಲಂಡನ್‌: ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರು ಪಬ್‌, ಸಂಗೀತ ಕಾರ್ಯಕ್ರಮಗಳು ಹಾಗೂ ಕ್ರೀಡಾ ಪಂದ್ಯಾವಳಿಗಳಲ್ಲಿ ಭಾಗಿಯಾಗದಂತೆ ನಿರ್ಬಂಧ ವಿಧಿಸುವಂತಹ ಹೊಸ ಕಾನೂನು ರೂಪಿಸಲು ಬ್ರಿಟನ್‌ ಸರ್ಕಾರ ಮುಂದಾಗಿದೆ.

ಸಮಾಜದ ಸ್ವಾಸ್ಥ್ಯ ಕಾಯ್ದುಕೊಳ್ಳುವ ಉದ್ದೇಶದಿಂದ ಹಾಗೂ ಅಪರಾಧ ‍ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಪರಾಧಿಗಳನ್ನು ಸಮಾಜದಿಂದ ದೂರ ಇಡುವಂತಹ ಈ ಕ್ರಮವನ್ನು ಅನುಸರಿಸಲು ಚಿಂತನೆ ನಡೆಸುತ್ತಿರುವುದಾಗಿ ಬ್ರಿಟನ್‌ ಕಾನೂನು ಸಚಿವಾಲಯದ ಕಾರ್ಯದರ್ಶಿ ಶಬಾನಾ ಮೊಹಮ್ಮದ್‌ ಹೇಳಿದ್ದಾರೆ.

ADVERTISEMENT

ಸಮಾಜದ ನಿಯಮಗಳನ್ನು ಮೀರಿ ಅಪರಾಧ ಕೃತ್ಯ ಎಸಗುವವರಿಗೆ ಶಿಕ್ಷೆ ಕಟ್ಟಿಟ್ಟಬುತ್ತಿ. ಅಲ್ಪ ಕಾಲ ಜೈಲಿನಲ್ಲಿ ಶಿಕ್ಷೆ ಅನುಭವಿಸಿ ನಂತರ ಹೊರಬಂದು ಸಮಾಜದಲ್ಲಿದ್ದೇ ಶಿಕ್ಷೆಯ ಅವಧಿ ಕಳೆಯುತ್ತಿರುವವರಿಗೆ ಸಮಾಜದಲ್ಲೂ ಶಿಕ್ಷೆಯ ಕಟ್ಟುಪಾಡುಗಳು ಮುಂದುವರಿಯಬೇಕು. ಹೀಗಾಗಿ ಅವರಿಗೆ ಸಾಮಾಜಿಕ ನಿರ್ಬಂಧಗಳನ್ನು ವಿಧಿಸಲು ಯೋಜಿಸಲಾಗಿದೆ. ಇದು ಎಲ್ಲಾ ಅಪರಾಧಿಗಳಿಗೂ ಅನ್ವಯವಾಗುತ್ತದೆ ಎಂದಿದ್ದಾರೆ.

ಅಲ್ಲದೇ, ಜೈಲಿನಿಂದ ಬಿಡುಗಡೆಗೊಂಡಿರುವವರ ಮೇಲೂ ನಿಗದಿತ ಅವಧಿಗೆ ನಿಗಾ ಇರಿಸಲಾಗುತ್ತದೆ. ಯಾವುದೇ ಕಾನೂನುಗಳನ್ನು ಉಲ್ಲಂಘಿಸಿದರೆ ಮತ್ತೆ ಅವರನ್ನು ಶಿಕ್ಷೆಗೆ ಗುರಿಪಡಿಸಲಾಗುತ್ತದೆ ಎಂದೂ ಶಬಾನಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.