ADVERTISEMENT

ಉಕ್ರೇನ್‌ನ ಮೈಕೊಲೈವ್‌ ಮೇಲೆ ರಷ್ಯಾ ರಾಕೆಟ್ ದಾಳಿ: ಮೃತರ ಸಂಖ್ಯೆ 28ಕ್ಕೆ ಏರಿಕೆ

ರಾಯಿಟರ್ಸ್
Published 1 ಏಪ್ರಿಲ್ 2022, 11:03 IST
Last Updated 1 ಏಪ್ರಿಲ್ 2022, 11:03 IST
ಮೈಕೊಲೈವ್‌ ಸರ್ಕಾರಿ ಪ್ರಧಾನ ಕಚೇರಿ ಕಟ್ಟಡದ ಮೇಲೆ ರಷ್ಯಾ ದಾಳಿ – ಪಿಟಿಐ ಚಿತ್ರ
ಮೈಕೊಲೈವ್‌ ಸರ್ಕಾರಿ ಪ್ರಧಾನ ಕಚೇರಿ ಕಟ್ಟಡದ ಮೇಲೆ ರಷ್ಯಾ ದಾಳಿ – ಪಿಟಿಐ ಚಿತ್ರ   

ಕೀವ್:ದಕ್ಷಿಣಉಕ್ರೇನ್‌ನ ನಗರವಾದ ಮೈಕೊಲೈವ್‌ನಲ್ಲಿರುವ ಪ್ರಾದೇಶಿಕ ಆಡಳಿತದ ಕಟ್ಟಡದ ಮೇಲೆ ಮಂಗಳವಾರ (ಮಾ.29) ರಷ್ಯಾ ನಡೆಸಿದ್ದ ರಾಕೆಟ್ ದಾಳಿಯ ಪರಿಣಾಮವಾಗಿ 28 ಜನರು ಮೃತಪಟ್ಟಿದ್ದಾರೆ ಎಂದು ಗವರ್ನರ್ ವಿಟಾಲಿ ಕಿಮ್ ಶುಕ್ರವಾರ ಆನ್‌ಲೈನ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

9 ಮಹಡಿ ಕಟ್ಟಡದ ಮೇಲೆ ಮಂಗಳವಾರ ಬೆಳಿಗ್ಗೆ ದಾಳಿ ನಡೆದಿತ್ತು. ದಾಳಿಯಿಂದಾಗಿ ಕಟ್ಟಡವು ಸಂಪೂರ್ಣವಾಗಿ ಧ್ವಂಸಗೊಂಡಿದೆ. ಬಳಿಕ ಮೃತದೇಹಗಳನ್ನು ಹೊರ ತೆಗೆಯಲಾಗಿದೆ ಎಂದು ಅವರು ಹೇಳಿದ್ದಾರೆ.

ಉಕ್ರೇನ್‌ ಮೇಲೆ ರಷ್ಯಾ ಸತತ ಎರಡು ತಿಂಗಳಿನಿಂದ ದಾಳಿ ನಡೆಸುತ್ತಿದ್ದು, ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ. ಸೈನಿಕರು ಸೇರಿದಂತೆ ನಾಗರಿಕರು ಮೃತಪಟ್ಟಿದ್ದಾರೆ.

ADVERTISEMENT

ರಷ್ಯಾ ಸೇನೆಯು ಫೆಬ್ರುವರಿ 24ರಂದು ಉಕ್ರೇನ್‌ ಮೇಲೆ ಆಕ್ರಮಣ ಆರಂಭಿಸಿತ್ತು. ರಷ್ಯಾ ಅಧ್ಯಕ್ಷ ಪುಟಿನ್ ಅವರು ಇದನ್ನು 'ವಿಶೇಷ ಮಿಲಿಟರಿ ಕಾರ್ಯಾಚರಣೆ' ಎಂದು ಕರೆದರೆ, ಪುಟಿನ್‌ ಅಪ್ರಚೋದಿತ ಆಕ್ರಮಣ ಆರಂಭಿಸಿದ್ದಾರೆ ಎಂದು ಉಕ್ರೇನ್ ಆರೋಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.