
ಸ್ಪೋಟದಲ್ಲಿ ಬೆಂಕಿಗಾಹುತಿಯಾದ ವಾಹನಗಳು..
ಪಿಟಿಐ
ಹ್ಯಾಮಿಲ್ಟನ್ (ಒಂಟಾರಿಯೊ): ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಸ್ಫೋಟ ಪ್ರಕರಣ ಸಂಬಂಧ ತನಿಖೆಗೆ ಭಾರತಕ್ಕೆ ಸಹಾಯ ಮಾಡಲು ಸಿದ್ದವಿರುವುದಾಗಿ ಅಮೆರಿಕ ಹೇಳಿದೆ.
‘ದೆಹಲಿ ಸ್ಫೋಟ ಪ್ರಕರಣದ ತನಿಖೆಗೆ ಭಾರತಕ್ಕೆ ಅಮೆರಿಕ ಸಹಾಯ ಮಾಡುವುದಾಗಿ ಹೇಳಿದೆ’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕ್ ರುಬಿಯೊ ಹೇಳಿದ್ದಾರೆ.
ಅಧಿಕಾರಿಗಳು ‘ಭಾರಿ ವೃತ್ತಿ ಪರ’ವಾಗಿ ತನಿಖೆ ನಡೆಸುತ್ತಿದ್ದಾರೆ ಎಂದು ರುಬಿಯೋ ಬುಧವಾರ ಹೇಳಿದ್ದಾರೆ.
‘ಸಹಾಯ ಮಾಡುವುದಾಗಿ ನಾವು ಹೇಳಿದ್ದೇವೆ. ಅವರಿಗೆ ತನಿಖೆ ಮಾಡುವ ಸಾಮರ್ಥ್ಯ ಇದೆ. ಅವರಿಗೆ ನಮ್ಮ ಸಹಾಯದ ಅಗತ್ಯ ಇಲ್ಲ. ಅವರು ಉತ್ತಮ ಕೆಲಸ ಮಾಡುತ್ತಿದೆ’ ಎಂದು ಅವರು ಭಾರತ ಸೇರಿ ಏಳು ರಾಷ್ಟ್ರಗಳ ವಿದೇಶಾಂಗ ಸಚಿವರನ್ನು ಭೇಟಿ ಮಾಡಿದ ಬಳಿಕ ಕೆನಡಾದಲ್ಲಿ ಮಾಧ್ಯಮದವರೊಂದಿಗೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.