ಬೀಜಿಂಗ್: ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿರುವ ಚೀನಾದಲ್ಲಿ ಹೊಸ ತಲೆನೋವೊಂದು ಕಾಣಿಸಿಕೊಂಡಿದೆ. ಅಲ್ಲಿನ ಯುವ ದಂಪತಿ ವಿಚ್ಛೇದನ ಪಡೆಯುವ ಪ್ರಮಾಣ ಇತ್ತೀಚೆಗೆ ಹೆಚ್ಚಾಗಿದೆ.
ಜೀವ ಉಳಿಸಿಕೊಳ್ಳುವ ಹೋರಾಟದ ನಡುವೆ ಈ ಸಮಸ್ಯೆ ಕಾಣಿಸಿಕೊಂಡಿದ್ದು ಹೇಗೆ ಎಂಬ ಪ್ರಶ್ನೆಗೆ ಅಲ್ಲಿನ ವಿವಾಹ ನೋಂದಣಿ ಇಲಾಖೆಯಿಂದ ಉತ್ತರವೂ ಸಿಕ್ಕಿದೆ. ‘ಕೊರೊನಾ ವೈರಸ್ ಕಾರಣದಿಂದಾಗಿ ಜನರನ್ನು ಮನೆ ಬಿಟ್ಟು ಕದಲದಂತೆ ಸೂಚಿಸಲಾಗಿದೆ. ದಂಪತಿ ಹೆಚ್ಚು ಸಮಯ ಮನೆಗಳಲ್ಲೇ ಕಳೆಯುತ್ತಿದ್ದಾರೆ. ಹೀಗಾಗಿ ಅವರ ನಡುವೆ ಕಲಹ, ಮನಸ್ತಾಪ ಹೆಚ್ಚಾಗಿದೆ,’ ಎಂದು ವಿವಾಹ ನೋಂದಣಿ ಇಲಾಖೆಯ ಅಧಿಕಾರಿ ಲು ಶಿಜುನ್ ಎಂಬುವವರು ಹೇಳಿರುವುದಾಗಿ ಡೇಲಿ ಮೇಲ್ ವರದಿ ಮಾಡಿದೆ.
ಅಲ್ಲಿನ ವಿವಾಹ ನೋಂದಣಿ ಇಲಾಖೆಗೆ ಫೆ.24ರಿಂದ ಈಚೆಗೆ 300 ದಂಪತಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.