ಅಮೆರಿಕ ಅಧ್ಯಕ್ಷ ಜೋ ಬೈಡನ್
– ರಾಯಿಟರ್ಸ್ ಚಿತ್ರ
ಜೆರುಸಲೇಂ: ಲೆಬನಾನ್‌ನಲ್ಲಿ ಗಾಜಾ ಮಾದರಿಯ ಸೇನಾ ಕಾರ್ಯಾಚರಣೆ ಮಾಡಬಾರದು ಎಂದು ಇಸ್ರೇಲ್‌ಗೆ ಅಮೆರಿಕ ಮನವಿ ಮಾಡಿದೆ. ಪ್ಯಾಲೆಸ್ಟೀನ್ ಮಾದರಿ ಧ್ವಂಸ ಮಾಡಿ ಎದುರಿಸಬೇಕಾದಿತು ಎಂದು ಲೆಬನಾನ್‌ಗೆ ಇಸ್ರೇಲ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ಅಮೆರಿಕ ಈ ಮನವಿ ಮಾಡಿದೆ.
ಸದ್ಯದ ಪರಿಸ್ಥಿತಿ ಬಗ್ಗೆ ಜೋ ಬೈಡನ್ ಹಾಗೂ ಬೆಂಜಮಿನ್ ನೇತನ್ಯಾಹು ನಡುವೆ ದೂರವಾಣಿ ಮಾತುಕತೆ ನಡೆದಿದ್ದು, ‘ಹೆಚ್ಚು ಜನಸಾಂದ್ರತೆ ಇರುವ ಬೈರೂತ್‌ನಲ್ಲಿ ಸೇರಿದಂತೆ ಲೆಬನಾನ್‌ನಲ್ಲಿ ನಾಗರಿಕ ಹಾನಿಯನ್ನು ಕಡಿಮೆ ಮಾಡಬೇಕು’ ಎಂದು ಬೈಡನ್ ಹೇಳಿದ್ದಾಗಿ ಶ್ವೇತಭವನ ತಿಳಿಸಿದೆ.
‘ಗಾಜಾ ಮಾದರಿಯ ಹಾಗೂ ಅಲ್ಲಿ ಉಂಟಾದ ಹಾನಿಯ ರೂಪದ ಯಾವುದೇ ಸೇನಾ ಕಾರ್ಯಾಚರಣೆ ಲೆಬನಾನ್‌ನಲ್ಲಿ ಮಾಡಬಾರದು’ ಎಂದು ಅಮೆರಿಕದ ರಕ್ಷಣಾ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
‘ಲೆಬನಾನ್ ದೀರ್ಘ ಯುದ್ಧದ ಪ್ರಪಾತಕ್ಕೆ ಬೀಳುವ ಮೊದಲು ಅದನ್ನು ಉಳಿಸಲು ನಿಮಗೆ ಅವಕಾಶವಿದೆ. ನಿಮ್ಮ ದೇಶವನ್ನು ಹಿಜ್ಬುಲ್ಲಾದಿಂದ ಮುಕ್ತಗೊಳಿಸಿ. ಇಲ್ಲದಿದ್ದರೆ ಗಾಜಾದಂತೆ ವಿನಾಶ ಮತ್ತು ದುಃಖಕ್ಕೆ ಕಾರಣವಾಗಲಿದೆ’ ಎಂದು ನೇತನ್ಯಾಹು ಲೆಬನಾನ್ ನಾಗರಿಕರನ್ನು ಉದ್ದೇಶಿಸಿ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.