ಡೊನಾಲ್ಡ್ ಟ್ರಂಪ್
– ರಾಯಿಟರ್ಸ್ ಚಿತ್ರ
ವಾಷಿಂಗ್ಟನ್: ಅಧಿಕಾರ ಸ್ವೀಕರಿಸಿದ ಬಳಿಕ ಕ್ಷಿಪಣಿ ದಾಳಿ ನಿರೋಧಕ ‘ಐರನ್ ಡೋಮ್’ ವ್ಯವಸ್ಥೆ ನಿರ್ಮಿಸಲು ಸೇನೆಗೆ ನಿರ್ದೇಶಿಸುವುದಾಗಿ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಈ ವ್ಯವಸ್ಥೆ ಅಮೆರಿಕ ನಿರ್ಮಿತ ಆಗಿರಲಿದೆ ಎಂದು ಅವರು ತಿಳಿಸಿದ್ದಾರೆ.
ಕ್ಷಿಪಣಿ ನಿರೋಧಕ ‘ಫೋರ್ಸ್ ಶೀಲ್ಡ್’ ವ್ಯವಸ್ಥೆಯನ್ನು ಆಮೆರಿಕದಾದ್ಯಂತ ನಿರ್ಮಿಸುವುದಾಗಿ ಚುನಾವಣೆ ಪ್ರಚಾರದ ವೇಳೆ ಹೇಳಿದ್ದರು. ಐರನ್ ಡೋಮ್ ಅನ್ನು ಉದ್ದೇಶಿಸಿ ಹೀಗೆ ಹೇಳಿದ್ದರು. ಸದ್ಯ ಇಸ್ರೇಲ್ ಈ ಮಾದರಿಯ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಹೊಂದಿದೆ.
ಐರನ್ ಡೋಮ್ ವ್ಯವಸ್ಥೆಯನ್ನು ಇಸ್ರೇಲ್ ಅಮೆರಿಕದ ಸಹಾಯದೊಂದಿಗೆ ಅಭಿವೃದ್ಧಿಪಡಿಸಿದೆ. ಇದು ಕಿರು ವ್ಯಾಪ್ತಿಯ ರಾಕೆಟ್‌ಗಳನ್ನು ಹೊಡೆದುರುಳಿಸುವ ಕೆಲಸವನ್ನು ಬಹಳ ಕ್ಷಮತೆಯಿಂದ ಮಾಡುತ್ತದೆ. ಕಳೆದ ದಶಕದ ಆರಂಭದಲ್ಲಿ ಇದನ್ನು ಕಾರ್ಯಾಚರಣೆಗೆ ಅಳವಡಿಸಲಾಯಿತು. ಅಲ್ಲಿಂದ ಇಲ್ಲಿಯವರೆಗೆ ಇದು ಸಹಸ್ರಾರು ರಾಕೆಟ್‌ಗಳನ್ನು ಧ್ವಂಸಗೊಳಿಸಿದೆ. ಈ ವ್ಯವಸ್ಥೆಯು ಶೇಕಡ 90ರಷ್ಟು ನಿಖರ ಎಂದು ಇಸ್ರೇಲ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.