ನವದೆಹಲಿ: ಐದು ದಿನಗಳ ಅಮೆರಿಕದ ಪ್ರವಾಸದಲ್ಲಿರುವ ಪಾಕಿಸ್ತಾನ ಸೇನೆ ಮುಖ್ಯಸ್ಥ ಅಸೀಮ್ ಮುನೀರ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಶ್ವೇತಭವನದಲ್ಲಿ ಆಯೋಜಿಸಿದ್ದ ಖಾಸಗಿ ಔತಣಕೂಟದಲ್ಲಿ ಭಾಗಿಯಾಗಿದ್ದಾರೆ.
ಇರಾನ್–ಇಸ್ರೇಲ್ ನಡುವೆ ಸಂಘರ್ಷ ತೀವ್ರಗೊಳ್ಳುತ್ತಿರುವುದರ ನಡುವೆಯೇ ಅಮೆರಿಕಕ್ಕೆ ಮುನೀರ್ ಭೇಟಿ ಜಗತ್ತಿನ ಗಮನ ಸೆಳೆದಿದೆ. ‘ಇರಾನ್ ಬಗ್ಗೆ ಪಾಕಿಸ್ತಾನಕ್ಕೆ ಎಲ್ಲರಿಗಿಂತ ಹೆಚ್ಚು ಗೊತ್ತು’ ಎಂಬ ಟ್ರಂಪ್ ಹೇಳಿಕೆ ಹಲವು ಅನುಮಾನಗಳನ್ನೂ ಹುಟ್ಟುಹಾಕಿದೆ.
ಅದಾಗ್ಯೂ, ಟ್ರಂಪ್–ಮುನೀರ್ ನಡುವಿನ ಚರ್ಚೆಯ ಯಾವುದೇ ವಿವರಗಳನ್ನು ಬಹಿರಂಗಗೊಳಿಸಿಲ್ಲ.
ಏತನ್ಮಧ್ಯೆ, ಟ್ರಂಪ್–ಮುನೀರ್ ಔತಣಕೂಟ ಮೀಮ್ಸ್‌ಗಳಿಗೆ ಆಹಾರವಾಗಿದ್ದು, ‘ಬಿರಿಯಾನಿ ಮೂಲಕ ವಿಶ್ವ ಶಾಂತಿಯನ್ನು ತರಲು ಟ್ರಂಪ್ ಪ್ರಯತ್ನಿಸುತ್ತಿದ್ದಾರೆ’ ಎಂದು ನೆಟ್ಟಿಗರು ಲೇವಡಿ ಮಾಡಿದ್ದಾರೆ.
‘ಮುನೀರ್‌ಗೆ ಉಚಿತ ಆಹಾರ ನೀಡುವ ಮೂಲಕ ಸಮಯ ಬಂದಾಗ ಇರಾನ್ ಬೆನ್ನಿಗೆ ಇರಿಯುವಂತೆ ಟ್ರಂಪ್ ಸಜ್ಜುಗೊಳಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.
ಹಲವು ಬಾಲಿವುಡ್ ಸಿನಿಮಾಗಳ ಸನ್ನಿವೇಶಗಳನ್ನು ಬಳಸಿಕೊಂಡು ಟ್ರೋಲ್ ಮಾಡಿದ್ದಾರೆ.
ಪಾಕಿಸ್ತಾನದ ಭಯೋತ್ಪಾದಕ ಚಟುವಟಿಕೆಗಳ ವಿರುದ್ಧ ವಿಶ್ವದ ಗಮನ ಸೆಳೆದಿದ್ದ ಭಾರತ, ಮುನೀರ್ ಅವರ ಪ್ರಚೋದನಕಾರಿ ಭಾಷಣಗಳೇ ಪಹಲ್ಗಾಮ್ ಕೃತ್ಯಕ್ಕೆ ಕಾರಣವಾಗಿತ್ತು ಎಂದು ಆರೋಪಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.