ADVERTISEMENT

ಕಮಲಾ ಹ್ಯಾರಿಸ್, ಹಿಲರಿ ಕ್ಲಿಂಟನ್‌ಗಿದ್ದ ಭದ್ರತಾ ಅನುಮತಿ ಹಿಂಪಡೆದ ಟ್ರಂಪ್

ರಾಯಿಟರ್ಸ್
Published 22 ಮಾರ್ಚ್ 2025, 3:29 IST
Last Updated 22 ಮಾರ್ಚ್ 2025, 3:29 IST
<div class="paragraphs"><p>ಡೊನಾಲ್ಡ್ ಟ್ರಂಪ್</p></div>

ಡೊನಾಲ್ಡ್ ಟ್ರಂಪ್

   

– ರಾಯಿಟರ್ಸ್ ಚಿತ್ರ

ಬ್ರಿಜ್‌ವಾಟರ್, ನ್ಯೂಜೆರ್ಸಿ: ಮಾಜಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹಾಗೂ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರಿಗಿದ್ದ ಭದ್ರತಾ ಅನುಮತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿಂಪಡೆದಿದಿದ್ದಾರೆ. ಆ ಮೂಲಕ ತಮ್ಮ ವಿರೋಧಿ ಡೆಮಾಕ್ರಟಿಕ್ ಪಕ್ಷದ ನಾಯಕರ ವಿರುದ್ಧದ ಅವರ ಕ್ರಮ ಮುಂದುವರಿದಿದೆ.

ADVERTISEMENT

ಈ ಹಿಂದೆ ಮಾಜಿ ಅಧ್ಯಕ್ಷ ಜೋ ಬೈಡನ್‌ ಅವರಿಗಿದ್ದ ಭದ್ರತಾ ಅನುಮತಿಯನ್ನು ಟ್ರಂಪ್ ರದ್ದು ಮಾಡಿದ್ದರು.

‘ಈ ಕೆಳಕಂಡ ವ್ಯಕ್ತಿಗಳು ರಹಸ್ಯ ಮಾಹಿತಿ ಪಡೆಯುವುದು ರಾಷ್ಟ್ರೀಯ ಹಿತಾಸಕ್ತಿಗೆ ಅಲ್ಲ ಎಂದು ನಾನು ನಿರ್ಧರಿಸಿದ್ದೇನೆ’ ಎಂದು ಶುಕ್ರವಾರ ರಾತ್ರಿಯ ಪ್ರಕಟಣೆಯಲ್ಲಿ ಟ್ರಂಪ್ ಹೇಳಿದ್ದಾರೆ. ಈ ಪಟ್ಟಿಯಲ್ಲಿ ವಿದೇಶಾಂಗ ಇಲಾಖೆಯ ಮಾಜಿ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಅವರ ಹೆಸರೂ ಇದೆ.

‌ಈ ನಿರ್ಧಾರ ತಕ್ಷಣಕ್ಕೆ ಏನೂ ಪರಿಣಾಮ ಬೀರದಿದ್ದರೂ, ತಮ್ಮ ವಿರೋಧಿಗಳ ವಿರುದ್ಧ ಟ್ರಂಪ್ ಸೇಡು ತೀರಿಸಿಕೊಳ್ಳುವ ಈ ಕ್ರಮ ರಾಜಕೀಯ ಮೇಲಾಟಕ್ಕೆ ಕಾರಣವಾಗಲಿದೆ.

ಟ್ರಂಪ್ ಅವರ ಕಟು ಟೀಕಾಕಾರ ರಿಪಬ್ಲಿಕನ್ ಸಂಸದ ಲಿಜ್ ಚೆನೆ, ಶ್ವೇತ ಭವನದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಜಾಕ್ ಸುಲ್ಲಿವನ್, ಟ್ರಂಪ್ ಅವರ ಮೊದಲ ಅವಧಿಯಲ್ಲಿ ರಾಷ್ಟ್ರೀಯ ಭದ್ರತಾ ಕೌನ್ಸಿಲ್‌ನಲ್ಲಿ ರಷ್ಯಾ ತಜ್ಞರಾಗಿ ಕಾರ್ಯ ನಿರ್ವಹಿಸಿದ್ದ ಫಿಯೊನಾ ಹಿಲ್, ರಾಷ್ಟ್ರೀಯ ಭದ್ರತಾ ವಕೀಲ ಮಾರ್ಕ್ ಝೈದ್, ರಿಪಬ್ಲಿಕನ್ ಪಕ್ಷದ ಮಾಜಿ ಸಂಸದ ಆ್ಯಡಂ ಕಿನ್‌ಜಿಂಗರ್ ಅವರ ಭದ್ರತಾ ಅನುಮತಿಯನ್ನೂ ಹಿಂಪಡೆಯಲಾಗಿದೆ.

ಅಮೆರಿಕದ ಮಾಜಿ ಅಧ್ಯಕ್ಷರು ಸಾಂಪ್ರದಾಯಿಕವಾಗಿ ಗುಪ್ತಚರ ಮಾಹಿತಿಗಳನ್ನು ಪಡೆಯುತ್ತಿದ್ದರು. ಇದರಿಂದಾಗಿ ಅವರು ಹಾಲಿ ಅಧ್ಯಕ್ಷರಿಗೆ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿಯ ಬಗ್ಗೆ ಸಲಹೆ ನೀಡಬಹುದು.

2021ರಲ್ಲಿ ಜೋ ಬೈಡನ್ ಅವರು ಟ್ರಂಪ್ ಅವರಿದ್ದ ಭದ್ರತಾ ಅನುಮತಿಯನ್ನು ಹಿಂಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.