ADVERTISEMENT

ಚುನಾವಣಾ ಸವಾಲು ಇನ್ನೂ ಮುಗಿದಿಲ್ಲ: ಡೊನಾಲ್ಡ್ ಟ್ರಂಪ್

ಏಜೆನ್ಸೀಸ್
Published 14 ಡಿಸೆಂಬರ್ 2020, 2:56 IST
Last Updated 14 ಡಿಸೆಂಬರ್ 2020, 2:56 IST
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್   

ನ್ಯೂಯಾರ್ಕ್: ನವೆಂಬರ್‌ನಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಪರಾಭವಗೊಂಡರೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಮ್ಮ ಸೋಲನ್ನು ಪ್ರಶ್ನಿಸುವ ಸವಾಲು ಇನ್ನು ಮುಗಿದಿಲ್ಲ ಎಂದು ಉತ್ತರಿಸಿದ್ದಾರೆ.

'ಇನ್ನೂ ಮುಗಿದಿಲ್ಲ, ನಾವು ಮುಂದುವರಿಯುತ್ತೇವೆ' ಎಂದು ಭಾನುವಾರ ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಜೋ ಬಿಡನ್ ಗೆದ್ದ ಪ್ರಮುಖ ರಾಜ್ಯಗಳ ಅಧ್ಯಕ್ಷೀಯ ಚುನಾವಣೆ ಫಲಿತಾಂಶಗಳನ್ನು ರದ್ದುಗೊಳಿಸಬೇಕು ಎಂದು ಸಲ್ಲಿಸಲಾಗಿದ್ದ ಮನವಿಯನ್ನು ಅಮೆರಿಕ ಸುಪ್ರೀಂ ಕೋರ್ಟ್ ತಿರಿಸ್ಕರಿಸಿರುವ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಅವರಿಂದ ಇಂತಹದೊಂದು ಹೇಳಿಕೆ ವ್ಯಕ್ತವಾಗಿದೆ.

ADVERTISEMENT

ಅಕ್ರಮವಾಗಿ ಮತ ಚಲಾಯಿಸಿರುವ ಬಗ್ಗೆಯೂ ಡೊನಾಲ್ಡ್ ಟ್ರಂಪ್ ಆರೋಪ ಮಾಡಿದ್ದು, ಮತಗಳನ್ನು ಪ್ರಮಾಣೀಕರಿಸಲು ಸಾಧ್ಯವಿಲ್ಲ. ಹಾಗಾಗಿ ಈ ಚುನಾವಣೆಯನ್ನು ಪ್ರತಿಭಟಿಸಲಾಗುತ್ತಿದೆ ಎಂದರು.

ಈ ಬಗ್ಗೆ ಟ್ವೀಟ್ ಮಾಡಿರುವ ಟ್ರಂಪ್, ಜೋ ಬಿಡೆನ್ ಗೆದ್ದ ರಾಜ್ಯಗಳಲ್ಲಿ ಅನೇಕ ಮಂದಿ ಅಕ್ರಮವಾಗಿ ಮತ ಚಲಾಯಿಸಿದ್ದಾರೆ. ನಕಲಿ ಮತಪತ್ರಗಳಿಂದ ಮತಪೆಟ್ಟಿಗೆ ತುಂಬಲಾಗಿದೆ. ಈ ಮತಗಳನ್ನು ಸಂಪೂರ್ಣವಾಗಿ ಕಾನೂನುಬದ್ಧವಾಗಿ ಪ್ರಮಾಣೀಕರಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.