ಅಧ್ಯಕ್ಷರ ವಿಮಾನ ಹತ್ತುವ ಮೆಟ್ಟಿಲ ಮೇಲೆ ಎಡವಿದ ಟ್ರಂಪ್
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನ್ಯೂಜೆರ್ಸಿಯಲ್ಲಿ ವಿಮಾನ ಹತ್ತುವ ವೇಳೆ ಮೆಟ್ಟಿಲ ಮೇಲೆ ಮುಗ್ಗರಿಸಿದ್ದಾರೆ. ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ನೆಟ್ಟಿಗರು ಮಾಜಿ ಅಧ್ಯಕ್ಷ ಜೋ ಬೈಡನ್‌ಗೆ ಹೋಲಿಸಿದ್ದಾರೆ.
ಬೆಡ್‌ಮಿನಿಸ್ಟರ್ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದ ಬಳಿಕ ಅಧ್ಯಕ್ಷ ಟ್ರಂಪ್ ಮತ್ತು ಕಾರ್ಯದರ್ಶಿ ಮಾರ್ಕೊ ರುಬಿಯೊ ವಿಮಾನ ಪ್ರಯಾಣಕ್ಕೆ ಸಜ್ಜಾಗಿದ್ದರು. ಈ ವೇಳೆ ಮೆಟ್ಟಿಲ ಮೇಲೆ ಟ್ರಂಪ್ ಎಡವಿದ್ದಾರೆ, ತಕ್ಷಣ ಸುಧಾರಿಸಿಕೊಂಡು ಮೇಲೆ ಹತ್ತಿ, ಕೈಬೀಸಿದ್ದಾರೆ. ಟ್ರಂಪ್ ಬಳಿಕ ಮೆಟ್ಟಿಲು ಹತ್ತಿದ ರುಬಿಯೊ ಕೂಡ ಎಡವಿರುವುದನ್ನು ವಿಡಿಯೊದಲ್ಲಿ ಕಾಣಬಹುದು.
ಈ ಹಿಂದೆ ಜೋ ಬೈಡನ್ ಅಧ್ಯಕ್ಷರಾಗಿದ್ದ ವೇಳೆ ವಿಮಾನದ ಮೆಟ್ಟಿಲು ಹತ್ತುವಾಗ ಹಲವು ಬಾರಿ ಎಡವಿದ್ದರು. ಈಗ ಟ್ರಂಪ್ ಎಡವಿರುವುದನ್ನು ಬೈಡನ್ ಅವರಿಗೆ ಹೋಲಿಸಿರುವ ನೆಟ್ಟಿಗರು ತಮಾಷೆ ಮಾಡಿದ್ದಾರೆ.
‘ವಿಮಾನದ ಮೆಟ್ಟಿಲನ್ನೇ ಹತ್ತಲಾಗದ ಟ್ರಂಪ್ ಅಧ್ಯಕ್ಷರಾಗಲು ಅರ್ಹರಲ್ಲ, ಸರಿಯಾಗಿ ಹೇಳುತ್ತಿದ್ದೇನೆ ಹೌದಲ್ಲವೇ?’ ಎಂದು ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ.
ಇನ್ನೊಬ್ಬರು, ‘ಬೈಡನ್ ಹೆಜ್ಜೆ ಎಡವಿದ್ದ ಮೆಟ್ಟಿಲುಗಳ ಮೇಲೆಯೇ ಟ್ರಂಪ್ ಮುಗ್ಗರಿಸಿದ್ದಾರೆ. ಅಧ್ಯಕ್ಷರ ಸ್ಥಾನಕ್ಕೆ ಅವರು ರಾಜೀನಾಮೆ ನೀಡಬೇಕು’ ಎಂದು ಕಮೆಂಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.