ADVERTISEMENT

ಉಕ್ರೇನ್ ಗಡಿಯಲ್ಲಿರುವ ರಷ್ಯಾದ ವಾಯು ನೆಲೆ ಮೇಲೆ ಡ್ರೋನ್ ದಾಳಿ

ಏಜೆನ್ಸೀಸ್
Published 6 ಡಿಸೆಂಬರ್ 2022, 5:52 IST
Last Updated 6 ಡಿಸೆಂಬರ್ 2022, 5:52 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮಾಸ್ಕೊ: ಉಕ್ರೇನ್‌ ಗಡಿಯಲ್ಲಿರುವ ರಷ್ಯಾದ ಕುರ್ಸ್ಕ್‌ ಪ್ರಾಂತ್ಯದಲ್ಲಿನ ವಾಯು ನೆಲೆಗಳ ಮೇಲೆ ಡ್ರೋನ್ದಾಳಿ ನಡೆದಿದೆ ಎಂದು ಸ್ಥಳೀಯ ಗವರ್ನರ್‌ ಹೇಳಿಕೆ ನೀಡಿದ್ದಾರೆ.

ತನ್ನ ಎರಡು ವಾಯು ನೆಲೆಗಳ ಮೇಲೆ ಉಕ್ರೇನ್‌ ಡ್ರೋನ್ದಾಳಿ ನಡೆಸಿದೆ ಎಂದು ರಷ್ಯಾ ಸೋಮವಾರ ಆರೋಪಿಸಿತ್ತು.

'ದಾಳಿಯ ಪರಿಣಾಮವಾಗಿ ಕುರ್ಸ್ಕ್‌ ವಾಯು ನೆಲೆಯಲ್ಲಿರುವ ಒಂದು ತೈಲ ಸಂಗ್ರಹ ಟ್ಯಾಂಕ್‌ಗೆ ಬೆಂಕಿ ಬಿದ್ದಿದೆ. ಯಾವುದೇ ಸಾವು–ನೋವು ಸಂಭವಿಸಿಲ್ಲ' ಎಂದು ಗವರ್ನರ್‌ ರೋಮನ್‌ ಸ್ಟಾರೊವೊಯ್ಟ್‌ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.