ADVERTISEMENT

ಗಾಂಧೀಜಿಯವರ ಶಾಂತಿ, ಅಹಿಂಸಾ ಸಂದೇಶ ಇಂದು ಹೆಚ್ಚು ಪ್ರಸ್ತುತ: ಜೈಶಂಕರ್

ಪಿಟಿಐ
Published 28 ಜುಲೈ 2024, 10:47 IST
Last Updated 28 ಜುಲೈ 2024, 10:47 IST
<div class="paragraphs"><p>ಟೋಕಿಯೊದ ಎಡೋಗಾವಾದಲ್ಲಿ ಮಹಾತ್ಮ ಗಾಂಧೀಜಿಯವರ ಪ್ರತಿಮೆಯನ್ನು ಅನಾವರಣಗೊಳಿಸಿದ&nbsp;ಜೈಶಂಕರ್</p></div>

ಟೋಕಿಯೊದ ಎಡೋಗಾವಾದಲ್ಲಿ ಮಹಾತ್ಮ ಗಾಂಧೀಜಿಯವರ ಪ್ರತಿಮೆಯನ್ನು ಅನಾವರಣಗೊಳಿಸಿದ ಜೈಶಂಕರ್

   

(ಚಿತ್ರ ಕೃಪೆ–@DrSJaishankar)

ಟೋಕಿಯೊ: ಜಗತ್ತು ಸಂಘರ್ಷಗಳು ಮತ್ತು ರಕ್ತಪಾತಗಳಿಗೆ ಸಾಕ್ಷಿಯಾಗುತ್ತಿರುವ ಈ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರ ಶಾಂತಿ ಮತ್ತು ಅಹಿಂಸಾ ಸಂದೇಶ ಇಂದು ಹೆಚ್ಚು ಪ್ರಸ್ತುತವಾಗಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.

ADVERTISEMENT

ಇಂದು (ಭಾನುವಾರ) ಟೋಕಿಯೊದ ಎಡೋಗಾವಾದಲ್ಲಿ ಮಹಾತ್ಮ ಗಾಂಧೀಜಿಯವರ ಪ್ರತಿಮೆಯನ್ನು ಅನಾವರಣಗೊಳಿಸಿ ಬಳಿಕ ಅವರು ಮಾತನಾಡಿದರು.

ಕ್ವಾಡ್ ವಿದೇಶಾಂಗ ಸಚಿವರ ಸಭೆಗಾಗಿ ಎರಡು ದಿನಗಳ ಭೇಟಿಗಾಗಿ ಲಾವೋಸ್‌ಗೆ ತೆರಳಿದ್ದ ಅವರು ಇಂದು ಜಪಾನ್‌ಗೆ ಭೇಟಿ ನೀಡಿದ್ದಾರೆ. ಜಪಾನ್‌ನಲ್ಲಿರುವ ಭಾರತದ ರಾಯಭಾರಿ ಸಿ.ಬಿ ಜಾರ್ಜ್ ಅವರನ್ನು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಸಚಿವರು ಗಾಂಧೀಜಿಯವರ ಕಾಲಾತೀತ ಸಂದೇಶಗಳ ಕುರಿತು ಮಾತನಾಡಿದ್ದಾರೆ.

ಜಗತ್ತು ಸಂಘರ್ಷ, ಉದ್ವಿಗ್ನತೆ ಹಾಗೂ ರಕ್ತಪಾತವನ್ನು ನೋಡುತ್ತಿರುವ ಸಮಯದಲ್ಲಿ, ಗಾಂಧೀಜಿಯವರ ಸಂದೇಶಗಳು ಬಹಳ ಮುಖ್ಯ. ಬಾಪು ಅವರ ಸಾಧನೆಗಳು ಇಂದಿಗೂ ನಮಗೆ ಸ್ಫೂರ್ತಿ ನೀಡುತ್ತಿವೆ ಎಂದು ಜೈಶಂಕರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.