
ಕೇಪ್ ಟೌನ್: ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ಒಕ್ಕೂಟ ಬಹುತ್ವದ ಅಭಿವ್ಯಕ್ತಿ ಮಾತ್ರವಲ್ಲ, ಅಂತರರಾಷ್ಟ್ರೀಯ ಸವಾಲುಗಳನ್ನು ವಿಭಿನ್ನ ಹಾದಿಯ ಮೂಲಕ ಎದುರಿಸುವ ವೇದಿಕೆ ಎಂದು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಶುಕ್ರವಾರ ಹೇಳಿದರು.
ಇದೇ ವೇಳೆ ಐದು ರಾಷ್ಟ್ರಗಳ ಗುಂಪನ್ನು ‘ಜಗತ್ತಿನ ಸ್ಥಾಪಿತ ವೈಶಿಷ್ಟ್ಯ’ ಎಂದು ಬಣ್ಣಿಸಿದರು.
ಸಭೆಯಲ್ಲಿ ಬ್ರಿಕ್ಸ್ ರಾಷ್ಟ್ರಗಳ ವಿದೇಶಾಂಗ ಸಚಿವರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಬ್ರಿಕ್ಸ್ ರಾಷ್ಟ್ರಗಳು ಸುಧಾರಣೆಯ ಸಂದೇಶವನ್ನು ಬಹುಪಕ್ಷೀಯ ಜಗತ್ತಿಗೆ ಸಾರಬೇಕು. ಬ್ರಿಕ್ಸ್ ಇನ್ಮುಂದೆ ಪರ್ಯಾಯವಲ್ಲ ಜಗತ್ತಿನ ಸ್ಥಾಪಿತ ವೈಶಿಷ್ಟ್ಯ’ ಎಂದು ಹೇಳಿದರು.
ಒಕ್ಕೂಟವು ನ್ಯಾಯಯುತವಾದ, ಎಲ್ಲರನ್ನೂ ಒಳಗೊಳ್ಳುವ, ಸುಸ್ಥಿರ ಅಭಿವೃದ್ಧಿಯತ್ತ ಗಮನಹರಿಸುತ್ತದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಗೆ ‘ಬ್ರಿಕ್ಸ್’ ಸ್ನೇಹಿತರು ಬೆಂಬಲ ಸೂಚಿಸಿದ್ದಾರೆ ಎಂದೂ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.