ADVERTISEMENT

ವೆನೆಜುವೆಲಾಕ್ಕೆ ಸ್ಟಾರ್‌ಲಿಂಕ್ ಮೂಲಕ ಉಚಿತ ಇಂಟರ್‌ನೆಟ್ ನೀಡಿದ ಮಸ್ಕ್

ಏಜೆನ್ಸೀಸ್
Published 4 ಜನವರಿ 2026, 11:51 IST
Last Updated 4 ಜನವರಿ 2026, 11:51 IST
<div class="paragraphs"><p>ಇಲಾನ್‌ ಮಸ್ಕ್</p></div>

ಇಲಾನ್‌ ಮಸ್ಕ್

   

ವಾಷಿಂಗ್ಟನ್‌: ಅಮೆರಿಕದ ದಾಳಿಗೆ ಒಳಗಾಗಿ ಅಧ್ಯಕ್ಷರನ್ನೂ ಕಳೆದುಕೊಂಡು ಕಂಗೆಟ್ಟಿರುವ ವೆನೆಜುವೆಲಾಕ್ಕೆ ಸ್ಪೇಸ್ ಎಕ್ಸ್‌ ಒಡೆತನದ ಸ್ಟಾರ್‌ಲಿಂಕ್‌ ಮೂಲಕ ಉಚಿತ ಬ್ರಾಡ್‌ಬ್ಯಾಂಡ್‌ ಇಂಟರ್‌ನೆಟ್ ಸೇವೆ ಒದಗಿಸಿ ಬಿಲಿಯನೆರ್ ಇಲಾನ್‌ ಮಸ್ಕ್‌ ಬೆಂಬಲ ಸೂಚಿಸಿದ್ದಾರೆ.

ಸ್ಟಾರ್ ಲಿಂಕ್‌ ಈ ಕುರಿತು ಪೋಸ್ಟ್‌ನಲ್ಲಿ, ‘ನಿರಂತರ ಸಂಪರ್ಕಸಾಧಿಸಲು ವೆನೆಜುವೆಲಾ ಜನರಿಗೆ ಫೆಬ್ರುವರಿ 3ರವರೆಗೆ ಸ್ಟಾರ್‌ ಲಿಂಕ್‌ ಉಚಿತ ಬ್ರಾಡ್‌ಬ್ಯಾಂಡ್‌ ಸೇವೆ ನೀಡಲಿದೆ’ ಎಂದಿದೆ. 

ADVERTISEMENT

ಈ ಪೋಸ್ಟ್‌ಅನ್ನು ಮರು ಹಂಚಿಕೊಂಡಿರುವ ಇಲಾನ್‌ ಮಸ್ಕ್‌ ‘ವೆನೆಜುವೆಲಾ ಜನರಿಗೆ ಬೆಂಬಲವಾಗಿ’ ಎಂದು ಬರೆದುಕೊಂಡಿದ್ದಾರೆ.

ಅಮೆರಿಕ ಸೇನೆ ಶುಕ್ರವಾರ ತಡರಾತ್ರಿ ವೆನೆಜುವೆಲಾದ ರಾಜಧಾನಿ ಕರಾಕಸ್‌ ಮೇಲೆ ಭಾರಿ ಪ್ರಮಾಣದಲ್ಲಿ ವಾಯುದಾಳಿ ನಡೆಸಿದ್ದು, ಅಧ್ಯಕ್ಷ ನಿಕೊಲಸ್‌ ಮಡೂರೊ ಮತ್ತು ಅವರ ಪತ್ನಿ ಸಿಲಿಯಾ ಪ್ಲೋರ್ಸ್‌ ಅವರನ್ನು ಸೆರೆ ಹಿಡಿದಿದೆ. 

‘ನಿಕೊಲಸ್‌ ಮಡೂರೊ ಅಂತರರಾಷ್ಟ್ರೀಯ ಮಾದಕ ವಸ್ತು ಕಳ್ಳಸಾಗಾಣಿಕೆ ಜಾಲದ ಪ್ರಮುಖ ಸೂತ್ರಧಾರ’ ಎಂದು ಆರೋಪಿಸಿ ದಾಳಿ ನಡೆಸಿದ್ದ ಅಮೆರಿಕ ಮಡೂರೊ ದಂಪತಿಯನ್ನು ವಿಚಾರಣೆಗಾಗಿ ನ್ಯೂಯಾರ್ಕ್‌ಗೆ ಕರೆತರಲಾಗಿದೆ.

ಅಮೆರಿಕದ ಆರೋಪವನ್ನು ವೆನೆಜುವೆಲಾ ತಳ್ಳಿಹಾಕಿದ್ದು, ‘ಅಮೆರಿಕವು ದೇಶದ ಭಾರಿ ತೈಲ ನಿಕ್ಷೇಪದ ಮೇಲೆ ಕಣ್ಣಿಟ್ಟಿದೆ. ಮಡೂರೊ ಅವರನ್ನು ಅಧಿಕಾರದಿಂದ ಕೆಳಗಿಳಿಸಿ, ದೇಶದಲ್ಲಿ ರಾಜಕೀಯ ಅಸ್ಥಿರತೆ ಸೃಷ್ಟಿಸಲು ಯತ್ನಿಸುತ್ತಿದೆ’ ಎಂದು ಆರೋಪಿಸಿದೆ.

ಅಮೆರಿಕ ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿದ್ದ ಮಸ್ಕ್‌, ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಜೊತೆಗಿನ ಭಿನ್ನಾಭಿಪ್ರಾಯದ ಕಾರಣ ಹೊರಬಂದಿದ್ದರು. ಇದೀಗ, ವೆನೆಜುವೆಲಾಗೆ ಉಚಿತ ಇಂಟರ್‌ನೆಟ್‌ ಒದಗಿಸುವ ನಿರ್ಧಾರ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.