ADVERTISEMENT

ಮಾರಕ ವಿಷವಿಕ್ಕಿ ನವಾಲ್ನಿ ಹತ್ಯೆ: ರಷ್ಯಾ ವಿರುದ್ಧ ಯೂರೋಪಿನ 5 ರಾಷ್ಟ್ರಗಳ ಆರೋಪ

ಪಿಟಿಐ
Published 14 ಫೆಬ್ರುವರಿ 2026, 15:31 IST
Last Updated 14 ಫೆಬ್ರುವರಿ 2026, 15:31 IST
ಅಲೆಕ್ಸಿ ನವಾಲ್ನಿ
ಅಲೆಕ್ಸಿ ನವಾಲ್ನಿ   

ಮ್ಯೂನಿಚ್‌ (ಜರ್ಮನಿ): ‘ರಷ್ಯಾದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಾಲ್ನಿ ಅವರನ್ನು 2024ರಲ್ಲಿ ಜೈಲಿನಲ್ಲಿ, ಮಾರಕ ವಿಷವಿಕ್ಕಿ ರಷ್ಯಾವೇ ಹತ್ಯೆ ಮಾಡಿದೆ’ ಎಂದು ಯೂರೋಪಿನ ಐದು ರಾಷ್ಟ್ರಗಳು ಆರೋಪಿಸಿವೆ. 

ಮ್ಯೂನಿಚ್‌ನಲ್ಲಿ ನಡೆದ ಭದ್ರತಾ ಸಮ್ಮೇಳನದಲ್ಲಿ ಬ್ರಿಟನ್‌, ಫ್ರಾನ್ಸ್‌ , ಜರ್ಮನಿ, ಸ್ವೀಡನ್‌ ಮತ್ತು ನೆದರ್ಲೆಂಡ್ಸ್‌ ಈ ಆರೋಪ ಮಾಡಿವೆ. 

ನವಾಲ್ನಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಪ್ರಬಲ ರಾಜಕೀಯ ವಿರೋಧಿ ಆಗಿದ್ದರು. ಜೈಲಿನಲ್ಲಿದ್ದ ಅವರನ್ನು ಹತ್ಯೆ ಮಾಡಲು ದಕ್ಷಿಣ ಅಮೆರಿಕದಲ್ಲಿ ಕಂಡುಬರುವ ‘ಪಾಯಿಸನ್‌ ಡಾರ್ಟ್‌ ಕಪ್ಪೆ’ಯ ಚರ್ಮದಲ್ಲಿರುವ ‘ಎಪಿಬ್ಯಾಟಿಡಿನ್‌’ ಎಂಬ ವಿಷವನ್ನು ಬಳಸಿದೆ. ಮೃತದೇಹದ ಜೈವಿಕ ಮಾದರಿ ಪರಿಶೀಲನೆ ವೇಳೆ ಇದು ದೃಢಪಟ್ಟಿದೆ’ ಎಂದು ಈ ರಾಷ್ಟ್ರಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ. 

ADVERTISEMENT

19 ವರ್ಷಗಳ ಕಠಿಣ ಶಿಕ್ಷೆಗೆ ಗುರಿಯಾಗಿದ್ದ ನವಾಲ್ನಿ, 2024ರ ಫೆಬ್ರುವರಿಯಲ್ಲಿ ಜೈಲಿನಲ್ಲೇ ಮೃತಪಟ್ಟಿದ್ದರು.

‘ರಷ್ಯಾ ಎದುರಾಳಿಯನ್ನು ಕೊಲೆ ಮಾಡಿದೆ ಎನ್ನುವುದು ಈಗ ವೈಜ್ಞಾನಿಕವಾಗಿ ಸಾಬೀತಾಗಿದೆ’ ಎಂದು ಅಲೆಕ್ಸಿ ನವಾಲ್ನಿ ಅವರ ಪತ್ನಿ ಯೂಲಿಯಾ ಸುದ್ದಿಗಾರಿಗೆ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.