ADVERTISEMENT

ಎಐ ಬಳಸಿ ಮಕ್ಕಳ ಪೋರ್ನ್ ವಿಡಿಯೊ ತಯಾರು: ಯುರೋಪ್‌ನಲ್ಲಿ ಆಪರೇಷನ್ ಕಂಬರ್‌ಲ್ಯಾಂಡ್

‘ಯುರೋಪಿಯನ್ ಯೂನಿಯನ್‌ನ ಪೊಲೀಸ್ ಒಕ್ಕೂಟ ಯುರೋಪೊಲ್ ‘ಆಪರೇಷನ್ ಕಂಬರ್‌ಲ್ಯಾಂಡ್’ ಆರಂಭಿಸಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಫೆಬ್ರುವರಿ 2025, 11:16 IST
Last Updated 28 ಫೆಬ್ರುವರಿ 2025, 11:16 IST
<div class="paragraphs"><p>ಸೈಬರ್‌ ಕ್ರೈಂ ( ಸಾಂದರ್ಭಿಕ ಚಿತ್ರ)&nbsp;</p></div>

ಸೈಬರ್‌ ಕ್ರೈಂ ( ಸಾಂದರ್ಭಿಕ ಚಿತ್ರ) 

   

ಹೇಗ್, ಡೆನ್ಮಾರ್ಕ್: ಕೃತಕ ಬುದ್ಧಿಮತ್ತೆ (ಎಐ) ಬಳಸಿ ಮಕ್ಕಳ ಪೋರ್ನ್ ವಿಡಿಯೊಗಳನ್ನು ತಯಾರು ಮಾಡುತ್ತಿರುವರನ್ನು ಹೆಡೆಮುರಿಕಟ್ಟಲು ‘ಯುರೋಪಿಯನ್ ಯೂನಿಯನ್‌ನ ಪೊಲೀಸ್ ಒಕ್ಕೂಟ ಯುರೋಪೊಲ್ ‘ಆಪರೇಷನ್ ಕಂಬರ್‌ಲ್ಯಾಂಡ್’ ಆರಂಭಿಸಿದೆ.

‘ಈ ಕಾರ್ಯಾಚರಣೆಯ ಭಾಗವಾಗಿ ಮಕ್ಕಳ ಅಶ್ಲೀಲ ವಿಡಿಯೊಗಳನ್ನು ತಯಾರು ಮಾಡುತ್ತಿದ್ದ 25 ಜನರನ್ನು ಯುರೋಪ್ ಸೇರಿದಂತೆ ಆಸ್ಟ್ರೇಲಿಯಾ, ಬ್ರಿಟನ್, ಕೆನಡಾ ಮತ್ತು ನ್ಯೂಜಿಲೆಂಡ್‌ನಲ್ಲಿ ಬಂಧಿಸಲಾಗಿದೆ‘ ಎಂದು ಯುರೋಪೊಲ್ ತಿಳಿಸಿದೆ.

ADVERTISEMENT

‘‘ಆಪರೇಷನ್ ಕಂಬರ್‌ಲ್ಯಾಂಡ್’ ಭಾಗವಾಗಿ ಒಟ್ಟಾರೆ 273 ಶಂಕಿತ ಆರೋಪಿಗಳನ್ನು ಗುರುತಿಸಲಾಗಿದೆ. ಅದರಲ್ಲಿ ಇಲ್ಲಿಯವರೆಗೆ 25 ಜನರನ್ನು ಬಂಧಿಸಲಾಗಿದೆ. 33 ಮನೆಗಳನ್ನು ತಪಾಸಣೆ ಮಾಡಲಾಗಿದೆ. 173 ಸ್ಥಳಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದೆ.

‘ಎಐ ಬಳಸಿ ಮಕ್ಕಳ ಪೋರ್ನ್ ವಿಡಿಯೊಗಳನ್ನು ತಯಾರು ಮಾಡುತ್ತಿದ್ದ ಪ್ರಮುಖ ಜಾಲದ ಕಿಂಗ್‌ಪಿನ್‌ ಡೆನ್ಮಾರ್ಕ್ ಪ್ರಜೆಯನ್ನು ಕಳೆದ ನವೆಂಬರ್‌ನಲ್ಲಿ ಬಂಧಿಸಲಾಗಿತ್ತು. ಆತ ನೀಡಿದ ಸುಳಿವು ಆಧರಿಸಿ ಮತ್ತಷ್ಟು ಜನರನ್ನು ಬಂಧಿಸಲಾಗಿದೆ’ ಎಂದು ಯುರೋಪೊಲ್ ಅಧಿಕಾರಿಗಳು ತಿಳಿಸಿದ್ದಾರೆ.

‘ಈ ಕಾರ್ಯಾಚರಣೆ ಇನ್ನೂ ಮುಂದುವರೆಯಲಿದೆ. ಎಐ ಬಳಸಿ ಮಕ್ಕಳ ಪೋರ್ನ್ ವಿಡಿಯೊಗಳನ್ನು, ಅಶ್ಲಿಲ ಚಿತ್ರಗಳನ್ನು ಸೃಜಿಸುತ್ತಿರುವುದು ಯುರೋಪ್‌ಗೆ ಎಐನಿಂದ ಬಂದಿರುವ ದೊಡ್ಡ ಸೈಬರ್‌ ಕ್ರೈಂ ಸವಾಲಾಗಿದೆ. ಅಲ್ಲದೇ ಈ ಪ್ರಕರಣಗಳ ತನಿಖೆಯೂ ಅತ್ಯಂತ ಸವಾಲಿನ ವಿಷಯವಾಗಿದೆ’ ಎಂದು ಯುರೋಪೊಲ್ ಕಾರ್ಯಕಾರಿ ನಿರ್ದೇಶಕಿ ಕ್ಯಾಥರಿನ್ ಡಿ ಬೊಲ್ಲೆ ಹೇಳಿದ್ದಾರೆ.

ಯುರೋಪೊಲ್ ಎಂಬುದು (European Union Agency for Law Enforcement Cooperation) ಯುರೋಪಿಯನ್ ಒಕ್ಕೂಟ (EU) ರಾಷ್ಟ್ರಗಳ ಕಾನೂನು ಜಾರಿ ಮಾಡುವ ಅಂತರರಾಷ್ಟ್ರೀಯ ಸಂಘಟನೆಯಾಗಿದೆ. ಇದರ ಕೇಂದ್ರ ಕಚೇರಿ ಡೆನ್ಮಾರ್ಕ್‌ನ ಹೇಗ್‌ನಲ್ಲಿದೆ.

ಆಧಾರ– Europol

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.