ದಿ ಹೇಗ್: ಹವಾಮಾನ ಬದಲಾವಣೆಯಿಂದ ಭೂಮಿ ಮೇಲೆ ಆಗುವ ದುಷ್ಪರಿಣಾಮಗಳನ್ನು ತಡೆಯಲು ಎಲ್ಲ ರಾಷ್ಟ್ರಗಳು ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ವಿಫಲವಾದರೆ ಅದು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಲಿದೆ ಎಂದು ಅಂತರರಾಷ್ಟ್ರೀಯ ನ್ಯಾಯಾಲಯ ಬುಧವಾರ ಘೋಷಿಸಿದೆ.
ಈ ವಿಚಾರವಾಗಿ ಸಲಹಾರೂಪದ ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಾಲಯ,‘ಹವಾಮಾನ ಬದಲಾವಣೆಯಿಂದಾಗುವ ಪರಿಣಾಮಗಳು ಅಗಾಧ. ಈ ಸಮಸ್ಯೆಗೆ ತುರ್ತಾಗಿ ಪರಿಹಾರ ಕಂಡುಕೊಳ್ಳಬೇಕು ಇಲ್ಲದೇ ಹೋದಲ್ಲಿ ಅದು ಮನುಕುಲದ ಅಸ್ತಿತ್ವಕ್ಕೆ ಅಪಾಯ ಒಡ್ಡಲಿದೆ’ ಎಂದು ಎಚ್ಚರಿಸಿದೆ.
‘ಶುದ್ಧ, ಆರೋಗ್ಯಕರ ಹಾಗೂ ಸುಸ್ಥಿರ ಪರಿಸರ ಪ್ರತಿಯೊಬ್ಬರ ಹಕ್ಕು’ ಎಂದೂ ಪ್ರತಿಪಾದಿಸಿದೆ.
ದ್ವೀಪರಾಷ್ಟ್ರ ವನವಾಟು ನೇತೃತ್ವದಲ್ಲಿ ದಾಖಲಾಗಿರುವ ಪ್ರಕರಣದ ವಿಚಾರಣೆಯನ್ನು 15 ನ್ಯಾಯಮೂರ್ತಿಗಳು ಇದ್ದ ಪೀಠ ನಡೆಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.