ADVERTISEMENT

ಪಶ್ಚಿಮ ಆಫ್ರಿಕಾ | ನೈಗರ್‌ನಲ್ಲಿ ಉಗ್ರರ ದಾಳಿ: 58 ಸಾವು

ಏಜೆನ್ಸೀಸ್
Published 17 ಮಾರ್ಚ್ 2021, 1:59 IST
Last Updated 17 ಮಾರ್ಚ್ 2021, 1:59 IST
ದಾಳಿಯ ಚಿತ್ರ
ದಾಳಿಯ ಚಿತ್ರ   

ನಿಯಾಮೆ (ನೈಗರ್): ಪಶ್ಚಿಮ ಆಫ್ರಿಕಾದ ನೈಗರ್‌ ದೇಶದ ರಾಜಧಾನಿ ನಿಯಾಮೆ ಸಮೀಪದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 58 ಜನರು ಮೃತಪಟ್ಟಿದ್ದಾರೆ.

ಮಾಲಿಯ ಗಡಿಯಲ್ಲಿ ಈ ದಾಳಿ ನಡೆದಿದೆ. ಸರ್ಕಾರಿ ಬಸ್‌ ಅನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸಿದ್ದಾರೆ ಎಂದು ನೈಗರ್‌ ಸರ್ಕಾರಪ್ರಕಟಣೆಯಲ್ಲಿ ತಿಳಿಸಿದೆ.

ಬ್ಯಾನಿಬಂಗಸ್‌ ಪಟ್ಟಣಕ್ಕೆ ಹೊಂದಿಕೊಂಡಿರುವ ಚಿನೆಡೋಗರ್‌ ಹಳ್ಳಿಯ ಸಮೀಪದಲ್ಲಿ ಈ ದಾಳಿ ನಡೆದಿದೆ. ನಾಲ್ಕು ವಾಹನಗಳಲ್ಲಿ ಬಂದಿದ್ದ ಉಗ್ರರು ಬಸ್‌ ಅನ್ನು ಅಡ್ಡಗಟ್ಟಿ ಬಾಂಬ್‌ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ 58 ಜನರು ಮೃತಪಟ್ಟಿದ್ದಾರೆ ಎಂದು ನೈಗರ್‌ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಉಗ್ರರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ಕೈಗೊಂಡಿದ್ದಾರೆ. ಈವರೆಗೂ ಯಾವುದೇ ಉಗ್ರಗಾಮಿ ಸಂಘಟನೆ ಹೊಣೆ ಹೊತ್ತುಕೊಂಡಿಲ್ಲ.

ನೈಗರ್‌ ದೇಶದಲ್ಲಿ ಕಳೆದೊಂದು ದಶಕದಿಂದ ಎರಡು ಜಿಹಾದಿ ಉಗ್ರ ಸಂಘಟನೆಗಳು ಸಕ್ರಿಯವಾಗಿದ್ದು ಈ ಕೃತ್ಯವನ್ನು ಇವೇ ಸಂಘಟನೆಗಳು ಎಸಗಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.