ADVERTISEMENT

ಫ್ರಾನ್ಸ್ | ಶೀಘ್ರದಲ್ಲೇ ನೂತನ ಪ್ರಧಾನಿ ನೇಮಕ: ಮ್ಯಾಕ್ರನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಡಿಸೆಂಬರ್ 2024, 2:56 IST
Last Updated 6 ಡಿಸೆಂಬರ್ 2024, 2:56 IST
<div class="paragraphs"><p>ಇಮ್ಯಾನುಯೆಲ್ ಮ್ಯಾಕ್ರನ್</p></div>

ಇಮ್ಯಾನುಯೆಲ್ ಮ್ಯಾಕ್ರನ್

   

(ರಾಯಿಟರ್ಸ್ ಚಿತ್ರ)

ಪ್ಯಾರಿಸ್: ಫ್ರಾನ್ಸ್‌ನ ನೂತನ ಪ್ರಧಾನ ಮಂತ್ರಿಯನ್ನು ಶೀಘ್ರವೇ ನೇಮಕ ಮಾಡಲಾಗುವುದು ಎಂದು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ತಿಳಿಸಿದ್ದಾರೆ.

ADVERTISEMENT

ಅದೇ ಹೊತ್ತಿಗೆ 2027ರವರೆಗೆ ತಮ್ಮ ಅಧಿಕಾರವಧಿ ಪೂರ್ಣಗೊಳಿಸುವುದಾಗಿ ಮ್ಯಾಕ್ರನ್ ತಿಳಿಸಿದ್ದಾರೆ.

ಫ್ರಾನ್ಸ್‌ ಪ್ರಧಾನಿ ಮಿಷೆಲ್ ಬರ್ನಿಯರ್ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ನಿರ್ಣಯ ಅಂಗೀಕಾರವಾಗಿದೆ. ಇದರಿಂದ ಅವರು ಅಧಿಕಾರದಿಂದ ಪದಚ್ಯುತಗೊಂಡಿದ್ದಾರೆ. 1962ರ ಬಳಿಕ ಇದೇ ಮೊದಲ ಬಾರಿಗೆ ಅವಿಶ್ವಾಸ ನಿರ್ಣಯಕ್ಕೆ ಯಶಸ್ಸು ದೊರೆತಿದೆ.

ಹೊಸ ಸರ್ಕಾರ ರಚನೆ ಆಗುವವರೆಗೂ ಉಸ್ತುವಾರಿ ಪ್ರಧಾನಿಯಾಗಿ ಮಿಷೆಲ್ ಬರ್ನಿಯರ್ ಮುಂದುವರಿಯಬೇಕು ಎಂದು ಅಧ್ಯಕ್ಷ ಎಮಾನ್ಯುಯೆಲ್‌ ಮ್ಯಾಕ್ರನ್ ಅವರು ಸೂಚಿಸಿದ್ದಾರೆ.

ಅವಿಶ್ವಾಸ ನಿರ್ಣಯಕ್ಕೆ ಗೆಲುವಾದ ಹಿಂದೆಯೇ ಬರ್ನಿಯರ್ ಮತ್ತು ಅವರ ಸಂಪುಟ ಸದಸ್ಯರು ರಾಜೀನಾಮೆ ಸಲ್ಲಿಸಿದರು. ನಿರ್ಣಯದ ಪರ 331 ಮತಗಳು ಬಂದವು. ಅಂಗೀಕಾರಕ್ಕೆ ಒಟ್ಟು 288 ಮತಗಳ ಅಗತ್ಯವಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.