ADVERTISEMENT

ಇಸ್ರೇಲ್–ಅಮೆರಿಕ ದಾಳಿಗೆ ಟೆಹರಾನ್‌ನಲ್ಲಿರುವ ಗಾಂಧಿ ಆಸ್ಪತ್ರೆಗೆ ಹಾನಿ

ಏಜೆನ್ಸೀಸ್
Published 2 ಮಾರ್ಚ್ 2026, 6:01 IST
Last Updated 2 ಮಾರ್ಚ್ 2026, 6:01 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಎ.ಐ ಚಿತ್ರ

ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ಸೇರಿ ಭಾನುವಾರ (ಮಾ.1) ನಡೆಸಿದ ದಾಳಿಯಲ್ಲಿ ಉತ್ತರ ಟೆಹರಾನ್‌ನಲ್ಲಿರುವ ಗಾಂಧಿ ಆಸ್ಪತ್ರೆಗೆ ಹಾನಿಯಾಗಿದೆ ಎಂದು ಇರಾನ್‌ನ ಸುದ್ದಿ ಸಂಸ್ಥೆ ಐಎಸ್‌ಎನ್‌ಎ ವರದಿ ಮಾಡಿದೆ.

ADVERTISEMENT

‘ಟೆಹರಾನ್‌ನ ಗಾಂಧಿ ಆಸ್ಪತ್ರೆ ಮೇಲೆ ಝಿಯೋನಿಸ್ಟ್ –ಅಮೆರಿಕ ವಾಯು ದಾಳಿ ನಡೆಸಿದೆ’ ಎಂದು ಐಎಸ್‌ಎನ್‌ಎ ವರದಿ ಮಾಡಿದೆ. ಆಸ್ಪತ್ರೆಯೊಳಗೆ ಅವಶೇಷಗಳು ಇರುವ ವಿಡಿಯೊವನ್ನು ‘ಫಾರ್ಸ್’ ಹಾಗೂ ‘ಮಿಝನ್’ ಸುದ್ದಿ ಸಂಸ್ಥೆ ಪ್ರಕಟಿಸಿವೆ.

ಭಾರತದ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹೆಸರಿನಲ್ಲಿ ಆಸ್ಪತ್ರೆ ಇದೆ.

ಭಾನುವಾರ ಟೆಹರಾನ್‌ನ ಹೊರವಲಯದಲ್ಲಿರುವ ನಗರವೊಂದರ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆದಿದ್ದು, ಹಲವು ಮಂದಿ ಸಾವಿಗೀಡಾಗಿದ್ದಾರೆ. ಅನೇಕರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.

ಶತ್ರುಗಳ ದಾಳಿಯಿಂದಾಗಿ ರೇ ನಗರದ ಪೊಲೀಸ್ ಪ್ರಧಾನ ಕಚೇರಿ ಕಟ್ಟಡ ಮತ್ತು ಸಮೀಪದ ವಸತಿ ಕಟ್ಟಡಗಳಿಗೆ ಹಾನಿಯಾಗಿದೆ ಎಂದು ತಸ್ನಿಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಟೆಹರಾನ್‌ನಲ್ಲಿ ಸರಣಿ ಪ್ರಬಲ ಸ್ಫೋಟದ ಬೆನ್ನಲ್ಲೇ, ನಮ್ಮನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಇರಾನ್ ಸರ್ಕಾರಿ ದೂರದರ್ಶನವು ಭಾನುವಾರ ಸಂಜೆ ತಿಳಿಸಿದೆ. ಆದಾಗ್ಯೂ, ಪ್ರಸಾರವು ಸ್ಥಗಿತಗೊಂಡಿಲ್ಲ ಎಂದು ವರದಿಯಾಗಿದೆ.

(ವಿವಿಧ ಸುದ್ದಿ ಮೂಲಗಳನ್ನು ಆಧರಿಸಿ ಬರೆದ ಸುದ್ದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.