ಜೆರುಸೆಲೇಂ: ಸಮುದ್ರಯಾನದ ಮೂಲಕ ಗಾಜಾಪಟ್ಟಿಗೆ ತೆರಳುತ್ತಿದ್ದ ಹೋರಾಟಗಾರ್ತಿ ಗ್ರೇತಾ ಥನ್‌ಬರ್ಗ್ ಅವರನ್ನು ಇಸ್ರೇಲ್ ಪಡೆಗಳು ಬಂಧಿಸಿವೆ.
ಮಾನವೀಯ ನೆರವಿನ ಸಾಮಗ್ರಿಗಳನ್ನು ಹೊತ್ತು ಚಲಿಸುತ್ತಿದ್ದ ಹಡಗನ್ನು ಸಹ ಸೋಮವಾರ ಮುಂಜಾನೆ ವಶಪಡಿಸಿಕೊಂಡಿವೆ.
ಗಾಜಾಪಟ್ಟಿಯಲ್ಲಿ ಇಸ್ರೇಲ್ ಸೇನಾಪಡೆ ನಡೆಸುತ್ತಿರುವ ಸೇನಾ ಕಾರ್ಯಾಚರಣೆ ವಿರುದ್ಧ ಪ್ರತಿಭಟಿಸಲು ಬೆಂಬಲಿಗರೊಂದಿಗೆ ಗ್ರೇತಾ ತೆರಳುತ್ತಿದ್ದರು.
ಗ್ರೇತಾ ಅವರನ್ನು ಬಂಧಿಸುವುದರ ಜೊತೆಗೆ ಮಾನವೀಯ ನೆರವಿನ ಸಾಮಗ್ರಿ ಗಳಿದ್ದ ಹಡಗನ್ನು ಇಸ್ರೇಲ್ ವಶಪಡಿಸಿಕೊಂಡಿರುವುದರಿಂದ, ಪ್ಯಾಲೆಸ್ಟೀನ್‌ನ 20 ಲಕ್ಷ ಜನರನ್ನು ಕ್ಷಾಮದ ಅಪಾಯಕ್ಕೆ ತಳ್ಳಿದಂತಾಗಿದೆ.
‘ಹೋರಾಟಗಾರರನ್ನು ಇಸ್ರೇಲ್ ಪಡೆಗಳು ಅಪಹರಿಸಿವೆ’ ಎಂದು ಈ ಸಮುದ್ರಯಾನ ಆಯೋಜಿಸಿದ್ದ ಫ್ರೀಡಂ ಪ್ಲೋಟಿಲ್ಲಾ ಒಕ್ಕೂಟ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.