ADVERTISEMENT

ಜಗತ್ತಿನಾದ್ಯಂತ 75,000ಕ್ಕೂ ಹೆಚ್ಚು ಜೀವಗಳ ಬಲಿ ಪಡೆದ ಕೊರೊನಾ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 11:02 IST
Last Updated 7 ಏಪ್ರಿಲ್ 2020, 11:02 IST
ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕ – ಸಂಗ್ರಹ ಚಿತ್ರ
ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕ – ಸಂಗ್ರಹ ಚಿತ್ರ   

ಪ್ಯಾರಿಸ್‌: ಕೊರೊನಾ ವೈರಸ್‌ ಸಾಂಕ್ರಾಮಿಕ ಜಗತ್ತಿನಾದ್ಯಂತ 75,000ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರುವುದಾಗಿ ಎಎಫ್‌ಪಿ ಮಂಗಳವಾರ ವರದಿ ಮಾಡಿದೆ.

2019ರ ಡಿಸೆಂಬರ್‌ ಕೊನೆಯ ವಾರ ಚೀನಾದಲ್ಲಿ ಪತ್ತೆಯಾದ ಕೊರೊನಾ ವೈರಸ್‌ ಸೋಂಕು, ಜಗತ್ತಿನಾದ್ಯಂತ ವ್ಯಾಪಿಸಿದ್ದು, ಯುರೋಪ್‌ನಲ್ಲಿ ಅತಿ ಹೆಚ್ಚು ಜನರು ಸಾವಿಗೀಡಾಗಿದ್ದಾರೆ.

ಯುರೋಪ್‌ನಲ್ಲೇ 53,928 ಮಂದಿ ಸಾವಿಗೀಡಾಗಿದ್ದು, ಜಗತ್ತಿನಾದ್ಯಂತ ಮೃತಪಟ್ಟಿರುವ ಒಟ್ಟು ಸೋಂಕಿತರ ಸಂಖ್ಯೆ 75,538 ತಲುಪಿದೆ. ಆದರೆ, ಸರ್ಕಾರಗಳಿಂದ ಬಿಡುಗಡೆಯಾಗಿರುವ ಅಧಿಕೃತ ಸಂಖ್ಯೆಗೂ ಎಎಫ್‌ಪಿ ಲೆಕ್ಕಕ್ಕೂ ವ್ಯತ್ಯಾಸವಿದೆ.

ADVERTISEMENT

ಬಿಎನ್‌ಒ ನ್ಯೂಸ್‌ ವರದಿ ಪ್ರಕಾರ, ಜಗತ್ತಿನಾದ್ಯಂತ ದಾಖಲಾಗಿರುವ ಒಟ್ಟು ಪ್ರಕರಣಗಳು 13,52,753 ಹಾಗೂ 75,058 ಮಂದಿ ಸಾವಿಗೀಡಾಗಿದ್ದಾರೆ. ಅಮೆರಿಕದಲ್ಲಿ ಈವರೆಗೂ 3,66,869 ಸೋಂಕು ಪ್ರಕರಣಗಳು ವರದಿಯಾಗಿದ್ದು, 10,917 ಮಂದಿ ಮೃತಪಟ್ಟಿದ್ದಾರೆ. ಭಾರತದಲ್ಲಿ 4,778ಪ್ರಕರಣಗಳು ವರದಿಯಾಗಿದ್ದು, 135ಮಂದಿ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.