ADVERTISEMENT

Mali | ಚಿನ್ನದ ಗಣಿ ಕುಸಿದು 42 ಮಂದಿ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಫೆಬ್ರುವರಿ 2025, 12:34 IST
Last Updated 16 ಫೆಬ್ರುವರಿ 2025, 12:34 IST
<div class="paragraphs"><p>ಚಿನ್ನದ ಗಣಿ</p></div>

ಚಿನ್ನದ ಗಣಿ

   

(ಸಂಗ್ರಹ ಚಿತ್ರ)

ಮಾಲಿ: ಪೂರ್ವ ಮಾಲಿಯಲ್ಲಿ ಚಿನ್ನದ ಗಣಿ ಕುಸಿದು ಕನಿಷ್ಠ 42 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ADVERTISEMENT

ಕೆನಿಬಾ ಜಿಲ್ಲೆಯ ಬಿಲಾಲಿ ಕೊಟೊ ಗಣಿಯಲ್ಲಿ ಅವಘಡ ಸಂಭವಿಸಿದೆ. ಈ ಸಂಬಂಧ ಮಾಲಿಯ ಟೆಲಿವಿಷನ್‌ಗಳಲ್ಲಿ ವರದಿಯಾಗಿದೆ.

ಪಶ್ಚಿಮ ಆಫ್ರಿಕಾದ ದೇಶದಲ್ಲಿ ಈ ವರ್ಷ ಸಂಭವಿಸಿದ ಎರಡನೇ ದೊಡ್ಡ ದುರಂತ ಇದಾಗಿದೆ.

ಆಫ್ರಿಕಾದ ಅಗ್ರ ಮೂರು ಚಿನ್ನ ಉತ್ಪಾದನೆ ದೇಶಗಳಲ್ಲಿ ಮಾಲಿ ಒಂದಾಗಿದೆ.

ಜನವರಿ 29ರಂದು ಸಂಭವಿಸಿದ್ದ ಅಪಘಾತದಲ್ಲಿ ಮಹಿಳೆಯರು ಸೇರಿದಂತೆ ಹಲವರು ಮೃತಪಟ್ಟಿದ್ದರು.

ಕಳೆದ ವರ್ಷ ರಾಜಧಾನಿ ಬಮಾಕೊದ ಸಮೀಪದಲ್ಲಿ ಸಂಭವಿಸಿದ್ದ ಚಿನ್ನದ ಗಣಿ ದುರಂತದಲ್ಲಿ 70ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.