ADVERTISEMENT

ಕದನ ವಿರಾಮದ 6ನೇ ದಿನ: ಹಮಾಸ್‌ನಿಂದ 14 ಮಂದಿ ಒತ್ತೆಯಾಳುಗಳ ‌ಬಿಡುಗಡೆ

ನಾಲ್ವರು ಥಾಯ್‌ ಪ್ರಜೆಗಳು ಸೇರಿದಂತೆ 14 ಒತ್ತೆಯಾಳುಗಳ ‌ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ನವೆಂಬರ್ 2023, 3:41 IST
Last Updated 30 ನವೆಂಬರ್ 2023, 3:41 IST
<div class="paragraphs"><p>ರಾಯಿಟರ್ಸ್</p></div>
   

ರಾಯಿಟರ್ಸ್

ಟೆಲ್ ಅವಿವ್ (ಇಸ್ರೇಲ್): ಕದನ ವಿರಾಮ ಒಪ್ಪಂದದಂತೆ ಹಮಾಸ್‌ ಬಂಡುಕೋರರು ಬುಧವಾರ 10 ಮಂದಿ ಇಸ್ರೇಲಿಗಳು ಹಾಗೂ 4 ಮಂದಿ ಥಾಯ್ ಪ್ರಜೆಗಳು ಸೇರಿದಂತೆ ಒಟ್ಟು 14 ಜನ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

ಒತ್ತೆಯಾಳುಗಳನ್ನು ಗಾಜಾಪಟ್ಟಿಯಲ್ಲಿರುವ ರೆಡ್‌ಕ್ರಾಸ್‌ ಪ್ರತಿನಿಧಿಗಳಿಗೆ ಒಪ್ಪಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (IDF) ದೃಢಪಡಿಸಿದೆ. ಕದನ ವಿರಾಮ ಘೋಷಣೆಯ 6ನೇ ದಿನವಾದ ಬುಧವಾರ ಈ ಪ್ರಕ್ರಿಯೆ ನಡೆದಿದೆ.

ADVERTISEMENT

ಇಸ್ರೇಲ್‌ ಸರ್ಕಾರ ನ.22ರಂದು ಮಹತ್ವದ ನಿರ್ಧಾರ ತೆಗೆದುಕೊಂಡಿತ್ತು. 50 ಒತ್ತೆಯಾಳುಗಳ ಬಿಡುಗಡೆ ಷರತ್ತಿನೊಂದಿಗೆ ಕದನ ವಿರಾಮಕ್ಕೆ ಸಮ್ಮತಿಸಿತ್ತು. ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು, ‘ಇದು ಯುದ್ಧದ ಮುಕ್ತಾಯವಲ್ಲ‘ ಎಂದು ಸ್ಪಷ್ಟಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.