ADVERTISEMENT

Israel-Hamas war | ಸಂಘರ್ಷದಿಂದ 19,453 ಸಾವು: ಹಮಾಸ್ ಆರೋಗ್ಯ ಇಲಾಖೆ

ಏಜೆನ್ಸೀಸ್
Published 18 ಡಿಸೆಂಬರ್ 2023, 14:58 IST
Last Updated 18 ಡಿಸೆಂಬರ್ 2023, 14:58 IST
<div class="paragraphs"><p>ಇಸ್ರೇಲ್ ಮತ್ತು ಪ್ಯಾಲೆಸ್ಟೀನ್‌ನ ಹಮಾಸ್ ಬಂಡುಕೋರರ ನಡುವಿನ ಯುದ್ಧದಿಂದಾಗಿ&nbsp;ದಕ್ಷಿಣ ಇಸ್ರೇಲ್‌ ಗಡಿಯಲ್ಲಿರುವ ಗಾಜಾ ಪಟ್ಟಿಯಲ್ಲಿ ದಟ್ಟ ಹೊಗೆ ಆವರಿಸಿರುವುದು</p></div>

ಇಸ್ರೇಲ್ ಮತ್ತು ಪ್ಯಾಲೆಸ್ಟೀನ್‌ನ ಹಮಾಸ್ ಬಂಡುಕೋರರ ನಡುವಿನ ಯುದ್ಧದಿಂದಾಗಿ ದಕ್ಷಿಣ ಇಸ್ರೇಲ್‌ ಗಡಿಯಲ್ಲಿರುವ ಗಾಜಾ ಪಟ್ಟಿಯಲ್ಲಿ ದಟ್ಟ ಹೊಗೆ ಆವರಿಸಿರುವುದು

   

ಗಾಜಾ ಪಟ್ಟಿ: ಅಕ್ಟೋಬರ್‌ 7ರಂದು ಆರಂಭವಾದ ಇಸ್ರೇಲ್‌–ಹಮಾಸ್‌ ಸಂಘರ್ಷದಿಂದ ಪ್ಯಾಲೆಸ್ಟೇನಿಯನ್‌ ಭೂಪ್ರದೇಶದಲ್ಲಿ ಬರೋಬ್ಬರಿ 19,453 ಮಂದಿ ಮೃತಪಟ್ಟಿದ್ದಾರೆ ಎಂದು ಹಮಾಸ್‌ ಆಡಳಿತವಿರುವ ಗಾಜಾ ಪಟ್ಟಿಯಲ್ಲಿನ ಆರೋಗ್ಯ ಇಲಾಖೆ ತಿಳಿಸಿದೆ.

ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಗಾಜಾದಲ್ಲಿ ಕಳೆದೆರಡು ತಿಂಗಳಲ್ಲಿ 52,286 ಮಂದಿ ಗಾಯಗೊಂಡಿದ್ದಾರೆ.

ADVERTISEMENT

ಇಸ್ರೇಲ್‌–ಹಮಾಸ್‌ ನಡುವೆ ಕದನ ವಿರಾಮ ಘೋಷಿಸುವಂತೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಈಜಿಪ್ಟ್‌ ಕಳೆದವಾರ ಮಂಡಿಸಿದ್ದ ಕರಡು ನಿರ್ಣಯ ಭಾರಿ ಬಹುಮತದಲ್ಲಿ ಅಂಗೀಕಾರವಾಗಿದೆ.

ಇದರ ನಡುವೆಯೂ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು, 'ಗಾಜಾ ಇನ್ನೆಂದೂ ಉಗ್ರರ ಕೇಂದ್ರವಾಗದಂತೆ ಮಾಡುತ್ತೇವೆ' ಎಂದು ಗುಡುಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.