ADVERTISEMENT

ಬ್ರಿಟನ್‌ | ಪ್ರತಿಭಟನೆ ಮುಂದುವರಿಸಿದ ಸಿಬ್ಬಂದಿ; ರೈಲು ಸೇವೆಯಲ್ಲಿ ವ್ಯತ್ಯಯ

ಏಜೆನ್ಸೀಸ್
Published 25 ಜೂನ್ 2022, 14:04 IST
Last Updated 25 ಜೂನ್ 2022, 14:04 IST
ಸಿಬ್ಬಂದಿಯ ಪ್ರತಿಭಟನೆಯಿಂದಾಗಿ ರೈಲುಗಳ ಸಂಚಾರ ವ್ಯತ್ಯಯವಾಗಿದ್ದರಿಂದ ಲಂಡನ್‌ನ ವಾಟರ್‌ಲೂ ರೈಲು ನಿಲ್ದಾಣ ಬಿಕೊ ಎನ್ನುತ್ತಿತ್ತು –ಎಎಫ್‌ಪಿ ಚಿತ್ರ
ಸಿಬ್ಬಂದಿಯ ಪ್ರತಿಭಟನೆಯಿಂದಾಗಿ ರೈಲುಗಳ ಸಂಚಾರ ವ್ಯತ್ಯಯವಾಗಿದ್ದರಿಂದ ಲಂಡನ್‌ನ ವಾಟರ್‌ಲೂ ರೈಲು ನಿಲ್ದಾಣ ಬಿಕೊ ಎನ್ನುತ್ತಿತ್ತು –ಎಎಫ್‌ಪಿ ಚಿತ್ರ   

ಲಂಡನ್‌: ವೇತನ ಹೆಚ್ಚಳ, ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿರೈಲ್ವೆ ಸಿಬ್ಬಂದಿ ದೇಶದಾದ್ಯಂತ ನಡೆಸುತ್ತಿರುವ ಪ್ರತಿಭಟನೆ ಶನಿವಾರ ಮೂರನೇ ದಿನಕ್ಕೆ ಕಾಲಿಟ್ಟಿತು.

40,000 ಕ್ಲೀನರ್‌ಗಳು, ನಿರ್ವಹಣಾ ಸಿಬ್ಬಂದಿ, ನಿಲ್ದಾಣ ಸಿಬ್ಬಂದಿ ಪ್ರತಿಭಟಿಸುತ್ತಿರುವ ಪರಿಣಾಮ ಶನಿವಾರ ರೈಲುಗಳ ಸೇವೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿತ್ತು. ಕೆಲವೇ ಪ್ರಯಾಣಿಕ ರೈಲುಗಳು ಮಾತ್ರ ಸಂಚರಿಸಿದವು ಎಂದು ರೈಲ್ವೆ ಕಂಪನಿಗಳು ತಿಳಿಸಿವೆ.

ದೇಶದಲ್ಲಿ ಹಣದುಬ್ಬರ ನಾಲ್ಕು ದಶಕಗಳ ಗರಿಷ್ಠ ಮಟ್ಟಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ವೇತನ ಹೆಚ್ಚಿಸಬೇಕೆಂದು ರೈಲು, ಜಲಸಾರಿಗೆ ಹಾಗೂ ರಸ್ತೆ ಸಾರಿಗೆ ಒಕ್ಕೂಟಗಳು ಆಗ್ರಹಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.