ADVERTISEMENT

ಲೆಬನಾನ್‌ ಮೇಲೆ ಇಸ್ರೇಲ್‌ ದಾಳಿ: 11 ಸಾವು

ಕದನ ವಿರಾಮ ಒಪ್ಪಂದದ ಉಲ್ಲಂಘನೆ

ಏಜೆನ್ಸೀಸ್
Published 3 ಡಿಸೆಂಬರ್ 2024, 15:20 IST
Last Updated 3 ಡಿಸೆಂಬರ್ 2024, 15:20 IST
<div class="paragraphs"><p>ಗಾಜಾಪಟ್ಟಿಯ ಮೇಲೆ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಧ್ವಂಸಗೊಂಡ ಕಟ್ಟಡಗಳ ಅವಶೇಷಗಳಡಿ ಅಳಿದುಳಿದುದ್ದನ್ನು ಸಂಗ್ರಹಿಸಿದ ಸ್ಥಳೀಯರು&nbsp; &nbsp; &nbsp; </p></div>

ಗಾಜಾಪಟ್ಟಿಯ ಮೇಲೆ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಧ್ವಂಸಗೊಂಡ ಕಟ್ಟಡಗಳ ಅವಶೇಷಗಳಡಿ ಅಳಿದುಳಿದುದ್ದನ್ನು ಸಂಗ್ರಹಿಸಿದ ಸ್ಥಳೀಯರು     

   

ಜೆರುಸಲೇಂ: ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದ ಇಸ್ರೇಲ್‌, ಲೆಬನಾನ್‌ ಮೇಲೆ ಸೋಮವಾರ ನಡೆಸಿದ ವಾಯುದಾಳಿಯಲ್ಲಿ 11 ಜನರು ಮೃತಪಟ್ಟಿದ್ದಾರೆ.

ಇಸ್ರೇಲ್‌ ಕದನ ವಿರಾಮ ಉಲ್ಲಂಘಿಸುತ್ತಿದೆ ಎಂದು ಹಿಜ್ಬುಲ್ಲಾ ಬಂಡುಕೋರರು ಆರೋಪಿಸಿದ ಬೆನ್ನಲ್ಲೇ ಈ ದಾಳಿ ನಡೆದಿದೆ.

ADVERTISEMENT

ಲೆಬನಾನ್‌ನ ದಕ್ಷಿಣ ಭಾಗದಲ್ಲಿನ ಹ್ಯಾರಿಸ್‌ ಗ್ರಾಮದ ಮೇಲೆ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಐವರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಟಲ್ಲೌಸ ಹಳ್ಳಿಯ ಮೇಲೆ ನಡೆಸಿದ ಮತ್ತೊಂದು ದಾಳಿಯಲ್ಲೂ ನಾಲ್ವರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ.

ಹಿಜ್ಬುಲ್ಲಾ ಬಂಡುಕೋರರು ಲೆಬನಾನ್‌ನಲ್ಲಿ ಹೊಂದಿರುವ ಮೂಲಸೌಕರ್ಯ ಹಾಗೂ ರಾಕೆಟ್‌ ಲಾಂಚರ್‌ಗಳ ಮೇಲೆ ಇಸ್ರೇಲ್‌ ಮಿಲಿಟರಿಯು ಸೋಮವಾರ ತಡರಾತ್ರಿ ವೈಮಾನಿಕ ದಾಳಿ ನಡೆಸಿದೆ.

ಮೌಂಟ್‌ ಡೋವ್‌ ಕಡೆಗೆ ಹಿಜ್ಬುಲ್ಲಾ ಬಂಡುಕೋರರು ಎರಡು ಸ್ಫೋಟಕಗಳನ್ನು ಹಾರಿಸಿದ್ದಕ್ಕೆ ಪ್ರತಿಯಾಗಿ ಈ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್‌ ತಿಳಿಸಿದೆ.

ಹಿಜ್ಬುಲ್ಲಾ ಬಂಡುಕೋರರು ಕಳೆದ ಬುಧವಾರವಷ್ಟೇ ಇಸ್ರೇಲ್‌ ಜೊತೆ 60 ದಿನಗಳ ಕದನ ವಿರಾಮ ಒಪ್ಪಂದ ಮಾಡಿಕೊಂಡಿದ್ದರು. ಈ ಒಪ್ಪಂದ ಏರ್ಪಟ್ಟ ನಂತರ ಮೊದಲ ಬಾರಿಗೆ ನಡೆದ ಬೃಹತ್ ದಾಳಿ ಇದಾಗಿದೆ.

ವರ್ಷದಿಂದ ನಡೆದಿರುವ ಯುದ್ಧ ಕೊನೆಗಾಣಿಸಲು ಕದನ ವಿರಾಮ ಏರ್ಪಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.