ADVERTISEMENT

ಹಾಂಗ್‌ಕಾಂಗ್ | ಬೆಂಕಿ ಅವಘಡ: ಮೃತರ ಸಂಖ್ಯೆ 55ಕ್ಕೇರಿಕೆ, ಮೂವರು ಶಂಕಿತರ ಬಂಧನ

ಪಿಟಿಐ
Published 27 ನವೆಂಬರ್ 2025, 9:35 IST
Last Updated 27 ನವೆಂಬರ್ 2025, 9:35 IST
<div class="paragraphs"><p>ಕಟ್ಟಡಗಳನ್ನು ಬೆಂಕಿ ಮತ್ತು ಹೊಗೆ ಆವರಿಸಿಕೊಂಡಿರುವುದು</p></div>

ಕಟ್ಟಡಗಳನ್ನು ಬೆಂಕಿ ಮತ್ತು ಹೊಗೆ ಆವರಿಸಿಕೊಂಡಿರುವುದು

   

ಬೀಜಿಂಗ್/ಹಾಂಗ್‌ ಕಾಂಗ್: ಹಾಂಗ್‌ಕಾಂಗ್‌ನ ಬಹುಮಹಡಿ ಕಟ್ಟಡಗಳಲ್ಲಿ ಸಂಭವಿಸಿದ ಭೀಕರ ಬೆಂಕಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 55ಕ್ಕೆ ಏರಿಕೆಯಾಗಿದ್ದು, 279 ಜನರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಚೀನಾದ ಸರ್ಕಾರಿ ಮಾಧ್ಯಮ ವರದಿಗಳು ಗುರುವಾರ ತಿಳಿಸಿವೆ.

ಬುಧವಾರ ವಾಂಗ್ ಫುಕ್ ಕೋರ್ಟ್‌ ಎಂಬ ವಸತಿ ಕಟ್ಟಡದಲ್ಲಿ ಸಂಭವಿಸಿದ ಬೆಂಕಿ ಅವಘಡವನ್ನು ನರಹತ್ಯೆ ಎಂದು ಆರೋಪಿಸಿ ಮೂವರು ಶಂಕಿತರನ್ನು ಬಂಧಿಸಲಾಗಿದೆ ಎಂದು ಹಾಂಗ್‌ಕಾಂಗ್ ಪೊಲೀಸರ ಹೇಳಿಕೆಯನ್ನು ಉಲ್ಲೇಖಿಸಿ ಸರ್ಕಾರಿ ಸ್ವಾಮ್ಯದ ‘ಷಿನ್ಹುವಾ’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ADVERTISEMENT

ಹಾಂಗ್‌ಕಾಂಗ್ ವಿಶೇಷ ಆಡಳಿತ ಪ್ರದೇಶದ ಮುಖ್ಯ ಕಾರ್ಯನಿರ್ವಾಹಕ ಜಾನ್ ಲೀ ಮಾತನಾಡಿ, ‘ಇದು ಹಾಂಗ್‌ಕಾಂಗ್ ಇತಿಹಾಸದಲ್ಲೇ ಅತ್ಯಂತ ಭೀಕರ ಬೆಂಕಿ ಅವಘಡವಾಗಿದ್ದು, 279 ಜನರು ಇನ್ನೂ ಕಾಣೆಯಾಗಿದ್ದಾರೆ. ಬಹುಮಹಡಿ ಕಟ್ಟಡಗಳು ಬೆಂಕಿಗೆ ಆಹುತಿಯಾಗಿವೆ. ಕನಿಷ್ಠ 68 ಜನರು ಆಸ್ಪತ್ರೆಯಲ್ಲಿದ್ದು, ಅದರಲ್ಲಿ 16 ಜನರ ಸ್ಥಿತಿ ಗಂಭೀರವಾಗಿದೆ ಎಂದು ಹಾಂಗ್‌ಕಾಂಗ್‌ ಮೂಲದ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.