ADVERTISEMENT

ಹ್ಯೂಸ್ಟನ್‌: ಪೊಲೀಸ್‌ ಅಧಿಕಾರಿಯ ಹತ್ಯೆ; ಆರೋಪಿಗಳಿಗಾಗಿ ಶೋಧ

ಏಜೆನ್ಸೀಸ್
Published 10 ನವೆಂಬರ್ 2020, 9:24 IST
Last Updated 10 ನವೆಂಬರ್ 2020, 9:24 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹ್ಯೂಸ್ಟನ್ ‌(ಅಮೆರಿಕ): ಇಲ್ಲಿನ ಪೊಲೀಸ್‌ ಅಧಿಕಾರಿಯೊಬ್ಬರನ್ನು ಸೋಮವಾರ ಉತ್ತರ ಹ್ಯೂಸ್ಟನ್‌ ಮೋಟೆಲ್‌ ಪಕ್ಕದಲ್ಲಿ ಗುಂಡಿಕ್ಕಿ ಹತ್ಯೆಗೈಯಲಾಗಿದೆ. ಆರೋಪಿಗಳಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

ಹ್ಯೂಸ್ಟನ್‌ ಪೊಲೀಸ್‌ ಸಾರ್ಜೆಂಟ್‌ ಸೀನ್‌ ರಿಯಾಸ್‌ ಅವರು ರಕ್ತಸಿಕ್ತಗೊಂಡ ಸ್ಥಿತಿಯಲ್ಲಿ ಸೋಮವಾರ ಮಧ್ಯಾಹ್ನ 1.30ರಷ್ಟಕ್ಕೆ ಮೋಟೆಲ್‌ ಕಚೇರಿಗೆ ಆಗಮಿಸಿದ್ದರು. ಅವರ ಶರೀರದಲ್ಲಿ ಹಲವು ಗುಂಡಿನ ಗಾಯಗಳಿದ್ದವು ಎಂದು ಸಾಕ್ಷಿದಾರರು ಪೊಲೀಸರಿಗೆ ಮಾಹಿತಿ ನೀಡಿದರು.

ಸೀನ್‌ ರಿಯಾಸ್‌ ಅವರು ಸಾಮಾನ್ಯ ಉಡುಗೆಯಲ್ಲಿ ಅಂತರರಾಜ್ಯ 45 (ಹೆದ್ದಾರಿ) ಮೂಲಕ ಕೆಲಸದ ಸ್ಥಳದತ್ತ ಸಾಗುತ್ತಿದ್ದರು. ಈ ವೇಳೆ ನೀಲಿ ಬಣ್ಣದ ಮರ್ಸಿಡಿಸ್‌ ಕಾರಿನಲ್ಲಿದ್ದ ವ್ಯಕ್ತಿಯೊಂದಿಗೆ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸ್‌ ಮುಖ್ಯಸ್ಥ ಆರ್ಟ್ ಅಸೆವೆಡೊ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.