ಪ್ರಾತಿನಿಧಿಕ ಚಿತ್ರ
ದುಬೈ: ಕೆಂಪು ಸಮುದ್ರದಲ್ಲಿ ಸಾಗುತ್ತಿದ್ದ ಸರಕು ಸಾಗಣೆ ಹಡಗಿನ ಮೇಲೆ ಯೆಮೆನ್‌ನ ಹುಥಿ ಬಂಡುಕೋರರು ದಾಳಿ ನಡೆಸಿದ್ದಾರೆ. ಈ ದಾಳಿಯಿಂದಾಗಿ ಹಡಗಿನ ಮೂವರು ಸಿಬ್ಬಂದಿ ಮೃತಪಟ್ಟು, ಇತರ ಇಬ್ಬರು ಗಾಯಗೊಂಡಿದ್ದಾರೆ ಎಂದು ಐರೋಪ್ಯ ಒಕ್ಕೂಟದ ನೌಕಾಪಡೆ ಮಂಗಳವಾರ ಹೇಳಿದೆ.
ಗ್ರೀಸ್ ಒಡೆತನದ ‘ಎಟರ್ನಿಟಿ ಸಿ’ ಹಡಗು ದಾಳಿಗೆ ಒಳಗಾಗಿದ್ದು, ಲೈಬಿರಿಯಾದಲ್ಲಿ ನೋಂದಣಿಯಾಗಿದೆ.
ಮತ್ತೊಂದು ಹಡಗನ್ನು ಕೆಂಪು ಸಮುದ್ರದಲ್ಲಿ ಸೋಮವಾರ ಮುಳುಗಿಸಲಾಗಿದೆ ಎಂದೂ ಹುಥಿ ಬಂಡುಕೋರರು ಹೇಳಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.