ADVERTISEMENT

ICC Womens World Cup: ಭಾರತ ಬ್ಯಾಟಿಂಗ್; ವಿಂಡೀಸ್ ವಿರುದ್ಧ ಉತ್ತಮ ಆರಂಭ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಮಾರ್ಚ್ 2022, 4:27 IST
Last Updated 12 ಮಾರ್ಚ್ 2022, 4:27 IST
ಸ್ಮೃತಿ ಮಂದಾನ (ಚಿತ್ರಕೃಪೆ: ಟ್ವಿಟರ್)
ಸ್ಮೃತಿ ಮಂದಾನ (ಚಿತ್ರಕೃಪೆ: ಟ್ವಿಟರ್)   

ಹ್ಯಾಮಿಲ್ಟನ್:ಮಹಿಳೆಯರ ಏಕದಿನ ವಿಶ್ವಕಪ್ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿವೆಸ್ಟ್‌ ಇಂಡೀಸ್‌ ತಂಡದ ವಿರುದ್ಧ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ. 11 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಮಿಥಾಲಿ ರಾಜ್ ಪಡೆ2 ವಿಕೆಟ್ ಕಳೆದುಕೊಂಡು 68ರನ್ ಗಳಿಸಿದೆ.

ಸೆಡನ್ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿಇನಿಂಗ್ಸ್‌ ಆರಂಭಿಸಿದ ಅನುಭವಿ ಬ್ಯಾಟರ್‌ ಸ್ಮೃತಿ ಮಂದಾನ ಮತ್ತು ಯುವ ಆಟಗಾರ್ತಿ ಯಸ್ತಿಕಾ ಭಾಟಿಯಾ ಮೊದಲ ವಿಕೆಟ್‌ಗೆ 49 ರನ್ ಕೂಡಿಸಿದರು.

ಯಸ್ತಿಕಾ, 21 ಎಸೆತಗಳಲ್ಲಿ 6 ಬೌಂಡರಿ ಸಹಿತ 31 ರನ್ ಗಳಿಸಿದ್ದಾಗ ವಿಕೆಟ್ ಒಪ್ಪಿಸಿದ್ದಾರೆ. ಬಳಿಕ ಬಂದನಾಯಕಿ ಮಿಥಾಲಿ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಕೇವಲ 5 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ.

ADVERTISEMENT

ಸದ್ಯ 22 ರನ್ ಗಳಿಸಿರುವ ಮಂದಾನ ಅವರೊಂದಿಗೆ ದೀಪ್ತಿ ಶರ್ಮಾ (6) ಕ್ರೀಸ್‌ನಲ್ಲಿದ್ದಾರೆ.

ವಿಂಡೀಸ್ ಹಾಗೂ ಭಾರತ ಟೂರ್ನಿಯಲ್ಲಿ ತಲಾ ಎರಡು ಪಂದ್ಯಗಳನ್ನು ಆಡಿವೆ. ವಿಂಡೀಸ್ ಪಡೆ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧ ಜಯ ಸಾಧಿಸಿ ಅಜೇಯ ಓಟ ಮುಂದುವರಿಸುವ ಇರಾದೆಯಲ್ಲಿದೆ. ಆದರೆ, ಮೊದಲ ಪಂದ್ಯದಲ್ಲಿ ಪಾಕಿಸ್ತಾನವ ವಿರುದ್ಧ ಗೆದ್ದು, ನಂತರ ನ್ಯೂಜಿಲೆಂಡ್ ವಿರುದ್ಧ ಸೋತಿರುವ ಭಾರತ ಜಯದ ಹಳಿಗೆ ಮರಳುವ ಯೋಜನೆಯೊಂದಿಗೆ ಕಣಕ್ಕಿಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.