ಲಾಹೋರ್: ‘ಜೈಲಿನಲ್ಲಿರುವ ನನಗೆ ಏನಾದರೂ ತೊಂದರೆಯಾದಲ್ಲಿ, ಅದಕ್ಕೆ ಸೇನೆ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ಅವರನ್ನೇ ಹೊಣೆ ಮಾಡಿ’ ಎಂದು ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಪಕ್ಷದ ಕಾರ್ಯಕರ್ತರಿಗೆ ಬುಧವಾರ ಸೂಚಿಸಿದ್ದಾರೆ.
ಪಾಕಿಸ್ತಾನ ತೆಹ್ರೀಕ್–ಎ–ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥರಾಗಿರುವ 72 ವರ್ಷದ ಇಮ್ರಾನ್ ಖಾನ್, ವಿವಿಧ ಪ್ರಕರಣಗಳಿಗೆ ಸಂಬಂಧಿಸಿ 2023ರಿಂದ ಸೆರೆವಾಸದಲ್ಲಿದ್ದಾರೆ.
ಇಮ್ರಾನ್ ಖಾನ್ ಅವರನ್ನು ಬಿಡುಗಡೆ ಮಾಡುವಂತೆ ಪ್ರಧಾನಿ ಶೆಹಬಾಜ್ ಶರೀಫ್ ಹಾಗೂ ಸೇನೆ ಮೇಲೆ ಒತ್ತಡ ಹೇರುವುದಕ್ಕಾಗಿ ಆಗಸ್ಟ್ 5ರಿಂದ ಬೃಹತ್ ಆಂದೋಲನ ಆರಂಭಿಸಲು ಪಿಟಿಐ ಮುಂದಾಗಿದೆ.
‘ಇತ್ತೀಚಿನ ದಿನಗಳಲ್ಲಿ ಜೈಲಿನಲ್ಲಿ ನನಗೆ ನೀಡುತ್ತಿರುವ ಚಿತ್ರಹಿಂಸೆ ತೀವ್ರಗೊಂಡಿದೆ. ಪತ್ನಿ ಬುಶ್ರಾ ಬೀಬಿಗೂ ಇದೇ ಗತಿ ಆಗಿದೆ. ಆಕೆಯನ್ನು ಕೂಡಿಹಾಕಿರುವ ಕೊಠಡಿಯಲ್ಲಿನ ಟಿವಿಯನ್ನು ಸಹ ಬಂದ್ ಮಾಡಲಾಗಿದೆ’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.