
(ಚಿತ್ರ ಕೃಪೆ: X/@narendramodi)
ಜೊಹಾನಸ್‌ಬರ್ಗ್: ಜಿ20 ನಾಯಕರ ಶೃಂಗಸಭೆಯ ಸಂದರ್ಭದಲ್ಲಿ ಆಸ್ಟ್ರೇಲಿಯಾ ಮತ್ತು ಕೆನಡಾ ಒಳಗೊಂಡಂತೆ ತ್ರಿಪಕ್ಷೀಯ ತಂತ್ರಜ್ಞಾನ ಮತ್ತು ನಾವೀನ್ಯತೆ ಪಾಲುದಾರಿಕೆಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
'ಆಸ್ಟ್ರೇಲಿಯಾ-ಕೆನಡಾ-ಭಾರತ ತಂತ್ರಜ್ಞಾನ ಮತ್ತು ನಾವೀನ್ಯತೆ ಪಾಲುದಾರಿಕೆಯನ್ನು (ಎಸಿಐಟಿಐ) ಘೋಷಿಸಲು ನಾವು ಸಂತೋಷಪಟ್ಟುಕೊಳ್ಳುತ್ತೇವೆ' ಎಂದು ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಈ ಉಪಕ್ರಮವು ಮೂರು ಖಂಡಗಳು ಹಾಗೂ ಮೂರು ಸಾಗರಗಳಾದ್ಯಂತ ಪಾಲುದಾರಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ಬೆಳೆದು ಬರುತ್ತಿರುವ ತಂತ್ರಜ್ಞಾನ, ಪೂರೈಕೆ ಸರಪಳಿಗಳ ವೈವಿಧ್ಯೀಕರಣ, ಶುದ್ಧ ಇಂಧನ ಮತ್ತು ವ್ಯಾಪಕ ಎಐನ ತಂತ್ರಜ್ಞಾನವನ್ನು ಆಳವಡಿವಡಿಸಿಕೊಳ್ಳುವುದನ್ನು ಬೆಂಬಲಿಸುತ್ತದೆ' ಎಂದಿದ್ದಾರೆ.
ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ಉಪಕ್ರಮಗಳಿಗೆ ಪೂರಕವಾಗಿ ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಸಹಕಾರದಲ್ಲಿ ಮಹತ್ವಾಕಾಂಕ್ಷೆಯನ್ನು ಬಲಪಡಿಸುತ್ತದೆ ಎಂದು ಹೇಳಿದ್ದಾರೆ.
ಈ ಉಪಕ್ರಮವನ್ನು ಮುಂದುವರಿಸಿಕೊಂಡು ಹೋಗಲು 2026ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಮೂರು ದೇಶಗಳ ಅಧಿಕಾರಿಗಳು ಸಭೆ ಸೇರಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.