ADVERTISEMENT

ಕ್ಯಾಲಿಫೋರ್ನಿಯಾ ದೇವಾಲಯದ ಮೇಲೆ ದಾಳಿ: ನೀಚ ವಿಧ್ವಂಸಕ ಕೃತ್ಯ ಎಂದು ಭಾರತ ಖಂಡನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಮಾರ್ಚ್ 2025, 7:41 IST
Last Updated 9 ಮಾರ್ಚ್ 2025, 7:41 IST
<div class="paragraphs"><p>ಬಿಎಪಿಎಸ್ ಹಿಂದೂ ದೇವಾಲಯ</p></div>

ಬಿಎಪಿಎಸ್ ಹಿಂದೂ ದೇವಾಲಯ

   

ಚಿತ್ರ: baps.org

ನವದೆಹಲಿ: ಕ್ಯಾಲಿಫೋರ್ನಿಯಾದ ದೇವಾಲಯದಲ್ಲಿ ನಡೆದ ವಿಧ್ವಂಸಕ ಕೃತ್ಯವನ್ನು ಭಾರತ ಖಂಡಿಸಿದೆ.

ADVERTISEMENT

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್, ಈ ದಾಳಿಯನ್ನು ನೀಚ ವಿಧ್ವಂಸಕ ಎಂದು ಕರೆದಿದ್ದಾರೆ. ಸ್ಥಳೀಯ ಅಧಿಕಾರಿಗಳು ದುಷ್ಕರ್ಮಿಗಳ ​​ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

‘ಕ್ಯಾಲಿಫೋರ್ನಿಯಾದ ಚಿನೋ ಹಿಲ್ಸ್‌ನಲ್ಲಿರುವ ಹಿಂದೂ ದೇವಾಲಯದಲ್ಲಿ ನಡೆದ ವಿಧ್ವಂಸಕ ಕೃತ್ಯದ ಬಗ್ಗೆ ನಾವು ವರದಿಗಳನ್ನು ನೋಡಿದ್ದೇವೆ. ಅಂತಹ ಹೇಯ ಕೃತ್ಯಗಳನ್ನು ನಾವು ಅತ್ಯಂತ ಕಠಿಣ ಪದಗಳಲ್ಲಿ ಖಂಡಿಸುತ್ತೇವೆ. ಈ ಕೃತ್ಯಗಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮತ್ತು ಪೂಜಾ ಸ್ಥಳಗಳಿಗೆ ಸಾಕಷ್ಟು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯ ಕಾನೂನು ಜಾರಿ ಅಧಿಕಾರಿಗಳಿಗೆ ನಾವು ಒತ್ತಾಯಿಸುತ್ತೇವೆ’ಎಂದು ಎಂಇಎ ತಿಳಿಸಿದೆ.

ಲಾಸ್ ಏಂಜಲೀಸ್‌ನಲ್ಲಿ 'ಖಲಿಸ್ತಾನಿ ಜನಾಭಿಪ್ರಾಯ ಸಂಗ್ರಹ' ಎಂದು ಕರೆಯಲ್ಪಡುವ ಪ್ರಕ್ರಿಯೆ ಆರಂಭಕ್ಕೂ ಕೆಲ ದಿನಗಳ ಮೊದಲು ಶನಿವಾರ(ಮಾ.08)) ಕ್ಯಾಲಿಫೋರ್ನಿಯಾದ ಚಿನೋ ಹಿಲ್ಸ್‌ನಲ್ಲಿರುವ ಬಿಎಪಿಎಸ್ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಲಾಗಿದ್ದು, ಅಸಭ್ಯ ಸಂದೇಶಗಳನ್ನು ಬರೆಯಲಾಗಿದೆ.

ಚಿನೋ ಹಿಲ್ಸ್‌ನಲ್ಲಿರುವ ಶ್ರೀ ಸ್ವಾಮಿನಾರಾಯಣ ಮಂದಿರ ಅಪವಿತ್ರಗೊಂಡಿದೆ ಎಂದು ಬೋಚಸನ್‌ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ (ಬಿಎಪಿಎಸ್) ಶನಿವಾರ ಹೇಳಿದೆ.

‘ಈ ಬಾರಿ ಕ್ಯಾಲಿಫೋರ್ನಿಯಾದ ಚಿನೋ ಹಿಲ್ಸ್‌ನಲ್ಲಿ ಮತ್ತೊಂದು ಮಂದಿರ ಹಾನಿಗೊಳಗಾಗಿದ್ದು, ಹಿಂದೂ ಸಮುದಾಯವು ದ್ವೇಷದ ವಿರುದ್ಧ ದೃಢವಾಗಿ ನಿಂತಿದೆ. ಚಿನೋ ಹಿಲ್ಸ್ ಮತ್ತು ದಕ್ಷಿಣ ಕ್ಯಾಲಿಫೋರ್ನಿಯಾದ ಸಮುದಾಯದೊಂದಿಗೆ ಎಂದಿಗೂ ದ್ವೇಷ ಬೇರೂರಲು ನಾವು ಬಿಡುವುದಿಲ್ಲ’ ಎಂದು ಬಿಎಪಿಎಸ್ ಸಾರ್ವಜನಿಕ ವ್ಯವಹಾರಗಳ ವಿಭಾಗ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.